ಬಾಳೆಹಣ್ಣಿನ ಮಾಲ್ಪುವಾ

ರುಚಿಕರವಾದ ಬಾಳೆಹಣ್ಣಿನ ಮಾಲ್ಪುವಾ ಮಾಡುವ ವಿಧಾನ...

Published: 02nd April 2021 11:49 AM  |   Last Updated: 02nd April 2021 11:49 AM   |  A+A-


Banana malpua

ಬಾಳೆಹಣ್ಣಿನ ಮಾಲ್ಪುವಾ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು...

 • ಚುಕ್ಕಿ ಬಾಳೆಹಣ್ಣು- 1
 • ಹಾಲು- 3 ಬಟ್ಟಲು
 • ಸಕ್ಕರೆ- 1.5 ಬಟ್ಟಲು
 • ಗೋಧಿ ಹಿಟ್ಟು- 1 ಬಟ್ಟಲು
 • ಸಣ್ಣ ರವೆ- ಒಂದು ಸಣ್ಣ ಬಟ್ಟಲು
 • ಜೀರಿಗೆ- ಒಂದು ಚಮಚ
 • ಏಲಕ್ಕಿ ಪುಡಿ- ಅರ್ಧ ಚಮಚ
 • ಕ್ರೀಮ್- 2 ಚಮಚ
 • ಕೇಸರಿ ದಳ- 10
 • ಎಣ್ಣೆ-ಕರಿಯಲು

ಮಾಡುವ ವಿಧಾನ...

 • ಮೊದಲು ಮಿಕ್ಸಿ ಜಾರ್'ಗೆ ಒಂದು ಬಾಳೆಹಣ್ಣು ಹಾಗೂ ಅರ್ಧ ಬಟ್ಟಲು ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
 • ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು, ಗೋಧಿಹಿಟ್ಟು, ರವೆ, ಜೀರಿಗೆ, ಜೀರಿಗೆ, ಏಲಕ್ಕಿ ಪುಡಿ, ಕ್ರೀಮ್ ಹಾಕಿ ಮಿಶ್ರಣ ಮಾಡಿಕೊಂಡು, ಸ್ವಲ್ವ ಸ್ವಲ್ಪವೇ ಹಾಲನ್ನು ಹಾಕಿ ಉಂಡೆ ಕಟ್ಟದಂತೆ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
 • ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಸ್ವಲ್ಪ ನೀರು, ಸಕ್ಕರೆ ಹಾಗೂ ಕೇಸರಿ ದಳವನ್ನು ಹಾಕಿ ಪಾಕ ಸಿದ್ದಪಡಿಸಿಟ್ಟುಕೊಳ್ಳಬೇಕು.
 • ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆಯನ್ನು ಹಾಕಬೇಕು. ಎಣ್ಣೆ ಕಾದ ನಂತರ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವರೆಗೂ ಕರಿಯಬೇಕು. ನಂತರ ಈಗಾಗಲೇ ತಯಾರಿಸಿಕೊಂಡ ಸಕ್ಕರೆ ಪಾಕಕ್ಕೆ ಹಾಕಿ, 2 ನಿಮಿಷಗಳಾದ ಬಳಿಕ ತೆಗೆದರೆ ರುಚಿಕರವಾದ ಬಾಳೆಹಣ್ಣಿನ ಮಾಲ್ಪುವಾ ಸವಿಯಲು ಸಿದ್ಧ. 
Stay up to date on all the latest ಆಹಾರ-ವಿಹಾರ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp