ಫಿರ್ನಿ

ರುಚಿಕರವಾದ ಫಿರ್ನಿ ಮಾಡುವ ವಿಧಾನ...
ಫಿರ್ನಿ
ಫಿರ್ನಿ

ಬೇಕಾಗುವ ಪದಾರ್ಥಗಳು

  • ಹಾಲು- 1 ಲೀಟರ್
  • ಗೋಡಂಬಿ- 25 ಗ್ರಾಂ
  • ಪಿಸ್ತಾ- 25 ಗ್ರಾಂ
  • ಏಲಕ್ಕಿ ಪುಡಿ - 1 ಚಮಚ
  • ಅಕ್ಕಿ ಹಿಟ್ಟು- 3 ಚಮಚ
  • ಬಾದಾಮಿ- 20 ಗ್ರಾಂ
  • ಕೇಸರಿ ದಳ- 10-12
  • ಸಕ್ಕರೆ - 1 ಬಟ್ಟಲು

ಮಾಡುವ ವಿಧಾನ...

  • ಹಾಲು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕಾಯಿಸಿ, ಸಕ್ಕರೆ ಕರಗಿದ ಮೇಲೆ ಇದಕ್ಕೆ ಅಕ್ಕಿ ಹಿಟ್ಟು ಹಾಕಿ ಗಂಟು ಕಟ್ಟದಂತೆ ತಿರುವುತ್ತಿರಬೇಕು. 
  • ಸ್ವಲ್ಪ ಹೊತ್ತಿನ ಬಲಿಕ ಮಿಶ್ರಣ ಗಟ್ಟಿಯಾಗುತ್ತದೆ. ನಂತರ ಬಾದಾಮಿ, ಗೋಡಂಬಿ, ಪಿಸ್ತಾ ತುಂಡುಗಳನ್ನು ಮಾಡಿ ಹಾಕಿ.
  • ಸ್ವಲ್ಪ ಬಿಸಿ ಹಾಸಿನಲ್ಲಿ ಕೇಸರಿ ದಳಗಳನ್ನು ಹಾಕಿ ಕರಗಿಸಿ. ಬಾದಾಮಿ, ಗೋಡಂಬಿ ಹಾಕಿದ ಹಾಲಿಕೆ ಸೇರಿಸಿ.
  • ಏಲಕ್ಕಿ ಪುಡಿಯನ್ನು ಹಾಕಿ ಕೆಳಗಿಳಿಸಿ. ಇದನ್ನು ಬಿಸಿಯಾಗಿರುವಾಗಲೇ ಕುಡಿಯಬಹುದು ಅಥವಾ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿಯೂ ಸೇವಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com