ಸುವರ್ಣ ಗಡ್ಡೆ ಮಸಾಲೆ

ರುಚಿಕರವಾದ ಸುವರ್ಣ ಗಡ್ಡೆ ಮಸಾಲೆ ಮಾಡುವ ವಿಧಾನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೇಕಾಗುವ ಪದಾರ್ಥಗಳು

  • ಸುವರ್ಣ ಗಡ್ಡೆ- ಕಾಲು ಕೆಜಿ
  • ಏಲಕ್ಕಿ-1 
  • ಹಸಿಮೆಣಸಿನ ಕಾಯಿ -2 
  • ದನಿಯಾ ಪುಡಿ - 1 ಚಮಚ
  • ಅರಿಶಿನ- ಸ್ವಲ್ಪ
  • ಉಪ್ಪು, ಅಚ್ಛ ಖಾರದ ಪುಡಿ- ರುಚಿಗೆ ತಕ್ಕಷ್ಟು
  • ಜೀರಿಗೆ-ಅರ್ಧ ಚಮಚ
  • ಮೊಸರು- ಅರ್ಧ ಬಟ್ಟಲು
  • ಶುಂಠಿ- ಸ್ವಲ್ಪ
  • ಸಕ್ಕರೆ- ಅರ್ಧ ಚಮಚ
  • ಸಾಸಿವೆ- ಸ್ವಲ್ಪ

ಮಾಡುವ ವಿಧಾನ...

  • ಸುವರ್ಣಗಡ್ಡೆಯನ್ನು ಸಿಪ್ಪೆ ತೆಗೆದು ಉಪ್ಪು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬೇಯಿಸುವಾಗ ಒಂದು ಚಮಚ ವಿನಿಗರ್ ಹಾಕಿ.
  • ಸುವರ್ಣಗಡ್ಡೆ ಚೆನ್ನಾಗಿ ಬೆದ ಬಳಿಕ ನೀರನ್ನು ಬಸಿದಿಟ್ಟುಕೊಳ್ಳಿ. ನಂತರ ಜೀರಿಗೆ, ಏಲಕ್ಕಿ, ಶುಂಥಿ ಎಲ್ಲವನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ರುಬ್ಬಿದ ಮಿಶ್ರಣಕ್ಕೆ ಮೊಸರು, ದನಿಯಾ ಪುಡಿ, ಉಪ್ಪು, ಸಕ್ಕರೆ, ಅಚ್ಚ ಖಾರದಪುಡಿ, ಹಾಕಿ ಮಿಶ್ರಣ ಮಾಡಿ, ಈ ಮಿಶ್ರಣವನ್ನು ಪಾತ್ರೆಯೊಂದಕ್ಕೆ ಹಾಕಿಸಣ್ಣ ಉರಿಯಲ್ಲಿ ಕುದಿಸಿ ನಂತರ ಇದಕ್ಕೆ ಬೇಯಿಸಿದ ಸುವರ್ಣಗಡ್ಡೆಗಲನ್ನು ಹಾಕಿ 
  • ಎಣ್ಣೆಯಲ್ಲಿ ಒಗ್ಗರಣೆ ಕೊಟ್ಟರೆ ರುಚಿಕರವಾದ ಸುವಣ್ಣ ಗಡ್ಡೆ ಮಸಾಲೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com