ತರಕಾರಿ ಸಾಗು

ತರಕಾರಿ ಸಾಗು ಮಾಡುವ ವಿಧಾನ...
ತರಕಾರಿಸಾಗು
ತರಕಾರಿಸಾಗು

ಬೇಕಾಗುವ ಪದಾರ್ಥಗಳು

  • ಬೀನ್ಸ್- ಸಣ್ಣಗೆ ಹೆಚ್ಚಿದ್ದು ಒಂದು ಸಣ್ಣ ಬಟ್ಟಲು
  • ಕ್ಯಾರೆಟ್- ಸಣ್ಣಗೆ ಹೆಚ್ಚಿದ್ದು ಒಂದು ಸಣ್ಣ ಬಟ್ಟಲು
  • ಬಟಾಣಿ- ಸಣ್ಣಗೆ ಹೆಚ್ಚಿದ್ದು ಒಂದು ಸಣ್ಣ ಬಟ್ಟಲು
  • ಹೂಕೋಸು- ಸಣ್ಣಗೆ ಹೆಚ್ಚಿದ್ದು ಒಂದು ಸಣ್ಣ ಬಟ್ಟಲು
  • ಆಲೂಗಡ್ಡೆ - ಸಣ್ಣಗೆ ಹೆಚ್ಚಿದ್ದು ಒಂದು ಸಣ್ಣ ಬಟ್ಟಲು
  • ಉಪ್ಪು-ರುಚಿಗೆ ತಕ್ಕಷ್ಟು
  • ಈರುಳ್ಳಿ- 1
  • ಟೊಮೆಟೋ- 2 
  • ಗೋಡಂಬಿ-ಸ್ವಲ್ಪ
  • ಬೆಳ್ಳುಳ್ಳಿ- ಸ್ವಲ್ಪ
  • ಹಸಿಮೆಣಸಿನ ಕಾಯಿ-6-6
  • ಹುರಿಗಡಲೆ- 4 ಚಮಚ
  • ದನಿಯಾ ಅಥವಾ ದನಿಯಾ ಪುಡಿ- 1 ಚಮಚ
  • ಶುಂಠಿ-ಸ್ವಲ್ಪ
  • ಗಸಗಸೆ-ಸ್ವಲ್ಪ
  • ಪುದೀನಾ-ಸ್ವಲ್ಪ
  • ಕೊತ್ತಂಬರಿ ಸೊಪ್ಪು-ಸ್ವಲ್ಪ
  • ಚಕ್ಕ,ಲವಂಗ- ಸ್ವಲ್ಪ
  • ಏಲಕ್ಕಿ-1-2
  • ಪಲಾವ್ ಎಲೆ- 1
  • ಎಣ್ಣೆ-ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಪಾತ್ರೆಯೊಂದಕ್ಕೆ ಸ್ವಲ್ಪ ನೀರು, ಉಪ್ಪು ಹಾಗೂ ತರಕಾರಿಗಳನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
  • ನಂತರ ಮಿಕ್ರಿ ಜಾರ್'ಗೆ ಅರ್ಧ ಈರುಳ್ಳಿ, 1 ಟೊಮೆಟೋ, ಗೋಡಂಬಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಹುರಿಗಡಲೆ, ದನಿಯಾ ಅಥವಾ ದನಿಯಾ ಪುಡಿ, ಶುಂಠಿಸ ಗಸಗಸೆ, ಪುದೀನಾ, ಕೊತ್ತಂಬರಿ ಸೊಪ್ಪು, ಚಕ್ಕ,ಲವಂಗ, ಏಲಕ್ಕಿ, ಪಲಾವ್ ಎಲೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಉಳಿದ ಈರುಳ್ಳಿ ಹಾಗೂ ಟೊಮೆಟೋವನ್ನು ಸಣ್ಣಗೆ ಕತ್ತರಿಸಿಕೊಂಡು ಕಾದ ಎಣ್ಣೆಗೆ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ರುಬ್ಬಿಕೊಂಡ ಮಸಾಲೆಯನ್ನು ಹಾಕಿ 10 ನಿಮಿಷ ಕುದಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಅರಿಶಿಣದ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬಳಿಕ ಈಗಾಗಲೇ ಬೇಯಿಸಿಕೊಂಡ ತರಕಾರಿಗಳನ್ನು ಹಾಕಿ 5 ನಿಮಿಷ ಕುದಿಸಿದರೆ ರುಚಿಕರವಾದ ತರಕಾರಿ ಸಾಗು ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com