ಮಸಾಲೆ ಚಟ್ನಿ

ರುಚಿಕರವಾದ ಮಸಾಲೆ ಚಟ್ನಿ ಮಾಡುವ ವಿಧಾನ...
ಮಸಾಲೆ ಚಟ್ನಿ
ಮಸಾಲೆ ಚಟ್ನಿ

ಬೇಕಾಗುವ ಪದಾರ್ಥಗಳು...

  • ತೆಂಗಿನ ಕಾಯಿ ಚೂರು- ಒಂದು ಸಣ್ಣ ಬಟ್ಟಲು
  • ಬೆಳ್ಳುಳ್ಳಿ- ಸ್ವಲ್ಪ
  • ಈರುಳ್ಳಿ- ಸಣ್ಣ ಗಾತ್ರದ್ದು 1
  • ಜೀರಿಗೆ- ಸ್ವಲ್ಪ
  • ಕಾಳು ಮೆಣಸು- ಸ್ವಲ್ಪ
  • ಹಸಿಮೆಣಸಿನ ಕಾಯಿ- 4-5
  • ಕರಿಬೇವು-ಸ್ವಲ್ಪ
  • ಕೊತ್ತಂಬರಿ ಸೊಪ್ಪು-ಸ್ವಲ್ಪ
  • ಟೊಮೆಟೋ- ದೊಡ್ಡ ಗಾತ್ರದ್ದು ಒಂದು
  • ಉಪ್ಪು- ರುಚಿಗೆ ತಕ್ಕಷ್ಟು
  • ಹುಣಸೆಹಣ್ಣು- ಸ್ವಲ್ಪ
  • ಎಣ್ಣೆ- ಸ್ವಲ್ಪ

ಮಾಡುವ ವಿಧಾನ...

  • ಒಲೆಯ ಮೇಲೆ ಬಾಣಲೆಯಿಟ್ಟು 2-3 ಚಮಚ ಎಣ್ಣೆ ಹಾಕಿ ಉಪ್ಪು, ಹುಣಸೆಹಣ್ಣನ್ನು ಹೊರತುಪಡಿಸಿ ಮೇಲಿನ ಎಲ್ಲಾ ಪದಾರ್ಥಗಳನ್ನು ಕೆಂಪಗೆ ಹುರಿದುಕೊಳ್ಳಬೇಕು.
  • ನಂತರ ಎಲ್ಲವನ್ನೂ ಮಿಕ್ಸಿ ಜಾರ್'ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
  • ಬಳಿಕ ಈರುಳ್ಳಿಯನ್ನು ಸಣ್ಣಗೆ ಉದ್ದಕ್ಕೆ ಕತ್ತರಿಸಿಕೊಂಡು ರುಬ್ಬಿದ ಚಟ್ನಿಯೊಂದಿಗೆ ಮಿಶ್ರಣ ಮಾಡಿದರೆ ರುಚಿಕರವಾದ ಮಸಾಲೆ ಚಟ್ನಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com