
ಬಿಸ್ಕೆಟ್ ಪುಡಿಂಗ್
Source : Online Desk
ಬೇಕಾಗುವ ಪದಾರ್ಥಗಳು...
- ಗೋಧಿ ಬಿಸ್ಕೆಟ್- 15
- ಮೊಟ್ಟೆ- 3
- ಸಕ್ಕರೆ -100 ಗ್ರಾಂ
- ಉಪ್ಪು-1/4 ಚಮಚ
- ಏಲಕ್ಕಿ ಪುಡಿ- 1/4 ಚಮಚ
- ಹಾಲು- 250 ಎಂಎಲ್
ಮಾಡುವ ವಿಧಾನ...
- ಮೊದಲಿಗೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬಿಸ್ಕೆಟ್, ಮೊಟ್ಟೆ, ಸಕ್ಕರೆ, ಉಪ್ಪು, ಏಲಕ್ಕಿ ಪುಡಿ ಹಾಗೂ ಹಾಲು ಹಾಕಿ ರುಬ್ಬಿಕೊಳ್ಳಿ.
- ನಂತರ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ 1/2 ಬಟ್ಟಲು ಸಕ್ಕರೆ ಹಾಕಿ ಕೆಂಪಗಾಗುವವರೆಗೂ ಕೈಯಾಡಿಸಿ ಕೆರಾಮೆಲ್ ಸಿದ್ಧಪಡಿಸಿಕೊಳ್ಳಿ.
- ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು, ಇದರ ಈಗಾಗಲೇ ರುಬ್ಬಿಕೊಂಡ ಬಿಸ್ಕೆಟ್ ಮಿಶ್ರಣವನ್ನು ಹಾಕಿ ಮುಚ್ಚಿಡಿ.
- ದೊಡ್ಡ ಪಾತ್ರೆಗೆ ನೀರನ್ನು ಹಾಕಿ ಅದರಲ್ಲಿ ಬಿಸ್ಕೆಟ್ ಮಿಶ್ರಣ ಹಾಕಿರುವ ಪಾತ್ರೆಯನ್ನು ಇಟ್ಟು 30 ನಿಮಿಷ ಕಡಿಮೆ ಉರಿಯಲ್ಲಿ ಬೇಯಲು ಬಿಡಿ.
- ತಣ್ಣಗಾದ ಬಳಿಕ ಪಾತ್ರೆ ತೆಗೆದು ನಿಧಾನಗತಿಯಲ್ಲಿ ಕೇಕ್ ತೆಗೆದರೆ ರುಚಿಕರವಾದ ಬಿಸ್ಕೆಟ್ ಕೇಕ್ ಸವಿಯಲು ಸಿದ್ಧ.
Stay up to date on all the latest ಆಹಾರ-ವಿಹಾರ news