
ಮಾವಿನಕಾಯಿ ಶುಂಠಿ ಉಪ್ಪಿನಕಾಯಿ
Source : Online Desk
ಬೇಕಾಗುವ ಪದಾರ್ಥಗಳು...
- ಮಾವಿನ ಕಾಯಿ- ಮಧ್ಯಮ ಗಾತ್ರಕ್ಕೆ ಕತ್ತರಿಸಿದ್ದು 5 ಬಟ್ಟಲು (ಸಣ್ಣದ್ದು)
- ಎಣ್ಣೆ- 1 ಬಟ್ಟಲು
- ಶುಂಠಿ-ಅರ್ಧ ಬಟ್ಟಲು
- ಉಪ್ಪು- ರುಚಿಗೆತಕ್ಕಷ್ಟು
- ಖಾರದ ಪುಡಿ- 1 ಬಟ್ಟಲು
- ಜೀರಿಗೆ ಪುಡಿ -1 ಚಮಚ
- ಸಾಸಿವೆ, ಮೆಂತ್ಯೆ ಪುಡಿ - ಹುರಿದು ಪುಡಿ ಮಾಡಿದ್ದು ಅರ್ಧ ಚಮಚ
- ಇಂಗು- ಅರ್ಧ ಚಮಚ
- ಅರಿಶಿಣದ ಪುಡಿ-ಅರ್ಧ ಚಮಚ
ಮಾಡುವ ವಿಧಾನ....
- ಒಂದು ಪಾತ್ರೆಗೆ ಮಾವಿನಕಾಯಿ, ಉಪ್ಪು, ಖಾರದಪುಡಿ, ಜೀರಿಗೆ ಪುಡಿ, ಸಾಸಿವೆ ಮೆಂತ್ಯೆ ಪುಡಿ, ಅರಿಶಿಣದ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಪ್ಯಾನ್ ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಜೀರಿಗೆ ಹಾಕಿ. ಕೆಂಪಗಾದ ಬಳಿಕ ಶುಂಠಿಯನ್ನು ಹಾಕಿ ಕೆಂಪಗಾಗಲು ಬಿಡಿ. ನಂತರ ತಣ್ಣಗಾದ ಬೂಳಿಕ ಇದನ್ನು ಈಗಾಗಲೇ ಮಸಾಲೆ ಮಿಶ್ರಣ ಮಾಡಿದ ಮಾವಿನಕಾಯಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ಬಳಿಕ ಒಂದು ಬಾಟಲಿಗೆ ಇದನ್ನು ಹಾಕಿ ಗಾಳಿ ಹೋಗದಂತೆ ಮುಚ್ಚಳವನ್ನು ಹಾಕಿ 2 ದಿನಗಳ ಕಾಲ ನೆನೆಯಲು ಬಿಟ್ಟರೆ ರುಚಿಕರವಾದ ಮಾವಿನಕಾಯಿ ಶುಂಠಿ ಉಪ್ಪಿನಕಾಯಿ ಸವಿಯಲು ಸಿದ್ಧ.
Stay up to date on all the latest ಆಹಾರ-ವಿಹಾರ news