ನೆಲ್ಲಿಕಾಯಿ ಉಪ್ಪಿನಕಾಯಿ

ರುಚಿಕರವಾದ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವ ವಿಧಾನ...

Published: 06th January 2021 11:58 AM  |   Last Updated: 06th January 2021 11:58 AM   |  A+A-


Nellikai pickle

ನೆಲ್ಲಿಕಾಯಿ ಉಪ್ಪಿನಕಾಯಿ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

 • ನೆಲ್ಲಿಕಾಯಿ- 200 ಗ್ರಾಂ
 • ಜೀರಿಗೆ - ಒಂದೂವರೆ ಚಮಚ
 • ಸೋಂಕು- ಒಂದೂವರೆ ಚಮಚ
 • ಉಪ್ಪು-ರುಚಿಗೆ ತಕ್ಕಷ್ಟು
 • ಅರಿಶಿಣದ ಪುಡಿ - ಅರ್ಧ ಚಮಚ
 • ಸಾಸಿವೆ, ಮೆಂತ್ಯೆ ಪುಡಿ - 1-2 ಚಮಚ
 • ಖಾರದ ಪುಡಿ- 2 ಚಮಚ
 • ಇಂಗು- ಸ್ವಲ್ಪ
 • ಎಣ್ಣೆ- 1 ಬಟ್ಟಲು

ಮಾಡುವ ವಿಧಾನ...

 • ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ಕಾಟನ್‌ ಬಟ್ಟೆಯಲ್ಲಿ ಒರೆಸಿ. ನಂತರ ಅವುಗಳನ್ನು ನೀರಿನಲ್ಲಿ ಹಾಕಿ 2 ಚಮಚ ಉಪ್ಪು ಹಾಕಿ ಒಂದು ಗಂಟೆ ನೆನೆಸಿಡಿ. 
 • ಪ್ಯಾನ್ ವೊಂದಕ್ಕೆ ಎಣ್ಣೆ ಹಾಕಿ ನಂತರ ಅದಕ್ಕೆ ಸ್ವಲ್ಪ ಸಾಸಿವೆ, ಜೀರಿಗೆ ಹಾಗೂ ಸೋಪು ಕೆಂಪಗೆ ಮಾಡಿಕೊಳ್ಳಿ
 • ಬಳಿಕ ನೆಲ್ಲಿಕಾಯಿಗಳನ್ನು ಸಣ್ಣಗೆ ಕತ್ತರಿಸಿಕೊಂಡು ಅದಕ್ಕೆ ಉಪ್ಪು, ಅರಿಶಿಣದ ಪುಡಿ, ಖಾರದ ಪುಡಿ, ಸಾಸಿವೆ ಮಂತ್ಯೆ ಪುಡಿ, ಇಂಗು ಹಾಗೂ ಒಗ್ಗರಣೆ ಮಾಡಿಕೊಂಡ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಗಾಳಿಯಾಡ ಡಬ್ಬಿಗೆ ಹಾಗಿ 4-5 ದಿನ ಇಟ್ಟರೆ ರುಚಿಕರವಾದ ನೆಲ್ಲಿಕಾಯಿ ಉಪ್ಪಿನಕಾಯಿ ಸವಿಯಲು ಸಿದ್ಧ. 
Stay up to date on all the latest ಆಹಾರ-ವಿಹಾರ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp