
ನೆಲ್ಲಿಕಾಯಿ ತೊಕ್ಕು
Source : Online Desk
ಬೇಕಾಗುವ ಪದಾರ್ಥಗಳು...
- ನೆಲ್ಲಿಕಾಯಿ -20
- ಎಣ್ಣೆ- 1 ಬಟ್ಟಲು
- ಸಾಸಿವೆ- 1 ಚಮಚ
- ಅರಿಶಿನದ ಪುಡಿ- 1 ಚಮಚ
- ಜೀರಿಗೆ ಪುಡಿ- 1 ಚಮಚ
- ಇಂಗು- 1 ಚಮಚ
- ಮೆಂತ್ಯೆ- ಹುರಿದು ಪುಡಿ ಮಾಡಿದ್ದು 2 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಖಾರದಪುಡಿ- 1 1/2 ಚಮಚ
ಮಾಡುವ ವಿಧಾನ...
- ಕುಕ್ಕರ್'ಗೆ ನೆಲ್ಲಿಕಾಯಿಗಳನ್ನು ಹಾಕಿ 3-4 ವಿಷಲ್ ಕುಗಿಸಿ, ತಣ್ಮಗಾದ ಬಳಿಕ ನೆಲ್ಲಿಕಾಯಿ ಬೀಜಗಳನ್ನು ತೆಗೆಯಿರಿ. ಮಿಕ್ಸಿಯಲ್ಲಿ ನೆಲ್ಲಿಕಾಯಿಗಳನ್ನು ಹಾಕಿ ರುಬ್ಬಿಕೊಳ್ಳಿ.
- ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿಗೆ, ಇಂಗು, ಅರಿಶಿನದಪುಡಿ, ಮೆಂತ್ಯೆಪುಡಿ ಹಾಕಿ ಮಿಶ್ರಣ ಮಾಡಿ.
- ನಂತರ ಈಗಾಗಲೇ ರುಬ್ಬಿಕೊಂಡ ನೆಲ್ಲಿಕಾಯಿ ಪೇಸ್ಟ್, ಖಾರದ ಪುಡಿಯನ್ನು ಇದಕ್ಕೆ ಹಾಕಿ ಸಣ್ಣ ಉರಿಯಲ್ಲಿ ಹತ್ತು ನಿಮಿಷ ಹುರಿಯಿರಿ. ನೀರಿನಾಂಶ ಎಲ್ಲಾ ಹೋಗುವವರೆಗೂ ಒಲೆಯ ಮೇಲಿಟ್ಟು ಕೈಯಾಡಿಸಿ. ನಂತರ ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಟ್ಟರೆ 15 ದಿನ ಇಟ್ಟರೂ ಹಾಳಾಗುವುದಿಲ್ಲ.
- ಈ ರುಚಿಕರವಾದ ತೊಕ್ಕನ್ನು ಅನ್ನ, ರೊಟ್ಟಿ ಹಾಗೂ ಚಪಾಯಿಯೊಂದಿಗೆ ಸವಿಯಬಹುದು.
Stay up to date on all the latest ಆಹಾರ-ವಿಹಾರ news