ಮೂಲಂಗಿ ದೋಸೆ

ರುಚಿಕರವಾದ ಹಾಗೂ ಆರೋಗ್ಯಕರವಾದ ಮೂಲಂಗಿ ದೋಸೆ ಮಾಡುವ ವಿಧಾನ...

Published: 20th July 2021 02:01 PM  |   Last Updated: 20th July 2021 02:01 PM   |  A+A-


Radish dosa

ಮೂಲಂಗಿ ದೋಸೆ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

 • ಅಕ್ಕಿ-250 ಗ್ರಾಂ
 • ಮೂಲಂಗಿ- 2
 • ತೆಂಗಿನಕಾಯಿ ತುರಿ- ಒಂದು ಸಣ್ಣ ಬಟ್ಟಲು
 • ಹಸಿಮೆಣಸಿನ ಕಾಯಿ- 2-3
 • ಉಪ್ಪು- ರುಚಿಗೆ ತಕ್ಕಷ್ಟು
 • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
 • ಜೀರಿಗೆ-ಅರ್ಧ ಚಮಚ

ಮಾಡುವ ವಿಧಾನ...

 • ಅಕ್ಕಿಯನ್ನು ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನೆಯಲು ಬಿಡಬೇಕು. ನಂತರ ಮೂಲಂಗಿಯನ್ನು ಚೆನ್ನಾಗಿ ತೊಳೆದು ಕೊಬ್ಬರಿ ತುರಿಯುವ ಮಣೆಯಲ್ಲಿ ತುರಿದುಕೊಳ್ಳಬೇಕು.
 • ಅಕ್ಕಿ ನೆಂದ ಬಳಿಕ ನೀರನ್ನು ಬಸಿದು, ಇದರ ಜೊತೆಗೆ ಹಸಿಮೆಣಸಿನ ಕಾಯಿ, ತುರಿದುಕೊಂಡ ಮೂಲಂಗಿ ಹಾಗೂ ತೆಂಗಿನ ತುರಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
 • ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಉಪ್ಪು, ಜೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ತಟ್ಟೆ ಮುಚ್ಚಿ ಇಡಬೇಕು.
 • ನಂತರ ಕಾವಲಿಯನ್ನು ಒಲೆಯ ಮೇಲಿಟ್ಟು, ಕಾವಲಿ ಕಾದ ನಂತರ ಎಣ್ಣೆ ಸವರಿ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಬೇಯಿಸಿದರೆ, ರುಚಿಕರವಾದ ಹಾಗೂ ಆರೋಗ್ಯಕರವಾದ ಮೂಲಂಗಿ ದೋಸೆ ಸವಿಯಲು ಸಿದ್ಧ.

Stay up to date on all the latest ಆಹಾರ-ವಿಹಾರ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp