ಹುರಿಗಡಲೆ ಪೇಡಾ

ರುಚಿಕರವಾದ ಹುರಿಗಡಲೆ ಪೇಡಾ ಮಾಡುವ ವಿಧಾನ...
ಹುರಿಗಡಲೆ ಪೇಡಾ
ಹುರಿಗಡಲೆ ಪೇಡಾ

ಬೇಕಾಗುವ ಪದಾರ್ಥಗಳು

  • ಹುರಿಗಡಲೆ ಪುಡಿ- ಅರ್ಧಬಟ್ಟಲು
  • ಕೇಸರಿ- 7-10 ದಳ
  • ಹಾಲು- ಒಂದು ಸಣ್ಣ ಬಟ್ಟಲು (ಕಾಯಿಸಿ ಆರಿಸಿದ್ದು)
  • ಗಟ್ಟಿ ತುಪ್ಪ- 1-2 ಚಮಚ
  • ಸಕ್ಕರೆ ಪುಡಿ- 1 ಬಟ್ಟಲು
  • ಏಲಕ್ಕಿ ಪುಡಿ-ಅರ್ಧ ಚಮಚ

ಮಾಡುವ ವಿಧಾನ...

  • ಮೊದಲಿಗೆ ಸಣ್ಣ ಪಾತ್ರೆಗೆ ಗಟ್ಟಿ ತುಪ್ಪ ಹಾಗೂ ಬಟ್ಟಲು ಸಕ್ಕರೆಯನ್ನು ಹಾಕಿ ಚೆನ್ನಾಗಿ ಪೇಸ್ಟ್ ರೀತಿ ಮಾಡಿಕೊಳ್ಳಬೇಕು. 
  • ನಂತರ ಇದಕ್ಕೆ ಹುರಿಗಡಲೆ ಪುಡಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಕಾದ ಹಾಲಿಗೆ 7-10 ದಳ ಕೇಸರಿ ದಳಗಳನ್ನು ಹಾಕಿಡಬೇಕು.
  • ಬಳಿಕ ಕೇಸರಿದಳದಲ್ಲಿ ನೆನೆದ ಹಾಲನ್ನು ಸ್ವಲ್ಪ ಸ್ವಲ್ಪವೇ ಹುರಿಗಡಲೆಗೆ ಹಾಕಿ ಮೃದವಾಗಿ ಹಿಟ್ಟನ್ನು ಮಾಡಿಕೊಳ್ಳಬೇಕು. ನಂತರ ಹಿಟ್ಟಿಗೆ ಸ್ವಲ್ಪ ತುಪ್ಪವನ್ನು ಹಾಕಿ ಸಿಲಿಂಡರ್ ಆಕಾರಕ್ಕೆ ಮಾಡಿಕೊಂಡು, ಡ್ರೈಫ್ರೂಟ್ಸ್ ನಿಂದ ಅಲಂಕರಿಸಿದರೆ ರುಚಿಕರವಾದ ಹುರಿಗಡಲೆ ಪೇಡಾ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com