ಮಟನ್ ಕೈಮಾ ಉಂಡೆ ಸಾರು

ರುಚಿಕರವಾದ ಮಟನ್ ಕೈಮಾ ಉಂಡೆ ಸಾರು ಮಾಡುವ ವಿಧಾನ...

Published: 15th June 2021 02:05 PM  |   Last Updated: 15th June 2021 02:05 PM   |  A+A-


Mutton keema balls curry

ಮಟನ್ ಕೈಮಾ ಉಂಡೆ ಸಾರು

Posted By : Manjula VN
Source : Online Desk

ಉಂಡೆಗೆ ಬೇಕಾಗುವ ಪದಾರ್ಥಗಳು...

 • ಮಟನ್ ಕೈಮಾ- 500 ಗ್ರಾಂ
 • ಮಟನ್ ಮೂಳೆ – 4 ಪೀಸ್‌
 • ಕೊಬ್ಬರಿ - ಸ್ವಲ್ಪ
 • ಉಪ್ಪು- ರುಚಿಗೆ ತಕ್ಕಷ್ಟು
 • ಕಾಳು ಮೆಣಸು- ಸ್ವಲ್ಪ
 • ದನಿಯಾಪುಡಿ- 1 ಚಮಚ
 • ಅಚ್ಚ ಖಾರದ ಪುಡಿ- 1 ಚಮಚ
 • ಬೆಳ್ಳುಳ್ಳು- ಸ್ವಲ್ಪ
 • ಚಕ್ಕೆ, ಲವಂಗ- ಸ್ವಲ್ಪ
 • ಗಸಗಸೆ- ಸ್ವಲ್ಪ
 • ಮೊಟ್ಟೆ- 1
 • ಹುರಿಗಡಲೆ-ಸ್ವಲ್ಪ

ಸಾರಿಗೆ ಬೇಕಾಗುವ ಪದಾರ್ಥಗಳು...

 • ತೆಂಗಿನ ತುರಿ- ಒಂದು ಬಟ್ಟಲು
 • ಈರುಳ್ಳಿ-1
 • ಬೆಳ್ಳುಳ್ಳಿ-ಸ್ವಲ್ಪ
 • ಚಕ್ಕೆ, ಲವಂಗ- ಸ್ವಲ್ಪ
 • ಟೊಮೆಟೋ- ಒಂದು ಸಣ್ಣದ್ದು
 • ಗಸಗಸೆ- ಸ್ವಲ್ಪ
 • ಕೊತ್ತಂಬರಿ ಸೊಪ್ಪು- ಸ್ವಲ್ಪ
 • ಎಣ್ಣೆ- ಸ್ವಲ್ಪ

ಮಾಡುವ ವಿಧಾನ... 

 • ಮೊದಲಿಗೆ ಮೊಟ್ಟೆ ಹಾಗೂ ಹುರಿಗಡಲೆ ಬಿಟ್ಟು ಮೇಲೆ ತಿಳಿಸಿದ ಉಂಡೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ನೀರು ಹಾಕದೆ ಮಿಕ್ಸಿ ಜಾರ್ ನಲ್ಲಿ ಪುಡಿ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಒಂದು ಮೊಟ್ಟೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಹುರಿಗಡಲೆಯನ್ನು ಪುಡಿ ಮಾಡಿಟ್ಟುಕೊಳ್ಳಬೇಕು.
 • ನಂತರ ಒಂದು ಪಾತ್ರೆಗೆ ಕೈಮಾ, ರುಬ್ಬಿಕೊಂಡ ಮಸಾಲೆಯನ್ನು, ಹುರಿಗಡಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.
 • ನಂತರ ಕುಕ್ಕರ್'ನ್ನು ಒಲೆಯ ಮೇಲಿಟ್ಟು, ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಅರಿಶಿನವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಮೂಳೆಗಳನ್ನು ಹಾಕಿ ಸ್ವಲ್ಪ ನೀರು, ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
 • ಬಳಿಕ ಮಿಕ್ಸಿ ಜಾರ್'ಗೆ ಈ ಮೇಲೆ ಹೇಳಿದ ಸಾರಿನ ಮಸಾಲೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ರುಬ್ಬಿಕೊಂಡ ಮಸಾಲೆಯನ್ನು ಬೆಂದ ಮೂಳೆಗಳಿಗೆ ಹಾಕಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ 10-10-15 ಕುದಿಯಲು ಬಿಡಬೇಕು. ಕುಡಿಯುತ್ತಿರುವ ಈ ಮಸಾಲೆಗೆ ಈಗಾಗಲೇ ಮಾಡಿಟ್ಟುಕೊಂಡ ಕೈಮಾ ಉಂಡೆಗಳನ್ನು ಹಾಕಿ 10-20 ನಿಮಿಷ ಬೇಯಿಸಿದರೆ ರುಚಿಕರವಾದ ಕೈಮಾ ಉಂಡೆ ಸಾರು ಸವಿಯಲು ಸಿದ್ಧ.

Stay up to date on all the latest ಆಹಾರ-ವಿಹಾರ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp