ನುಗ್ಗೇಕಾಯಿ ದಾಲ್

ರುಚಿಕರವಾದ ನುಗ್ಗೇಕಾಯಿ ದಾಲ್ ಮಾಡುವ ವಿಧಾನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೇಕಾಗುವ ಪದಾರ್ಥಗಳು

  • ನುಗ್ಗೇಕಾಯಿ- 4
  • ತೊಗರಿಬೇಳೆ - 1 ಚಮಚ
  • ಕಡಲೇಬೇಳೆ- 1 ಚಮಚ
  • ಮೈಸೂರ್ ಬೇಳೆ- 1 ಚಮಚ
  • ಹೆಸರುಬೇಳೆ- 1 ಚಮಚ
  • ಟೊಮೆಟೋ ಪ್ಯೂರಿ- 1 ಸಣ್ಣ ಬಟ್ಟಲು
  • ಈರುಳ್ಳಿ- 1
  • ಅಚ್ಚಖಾರದ ಪುಡಿ- 1 ಚಮಚ
  • ಕೊತ್ತಂಬರಿ ಸೊಪ್ಪು-ಸ್ವಲ್ಪ
  • ಜೀರಿಗೆ-ಸ್ವಲ್ಪ
  • ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲು ಬೇಳೆಗಳೆಲ್ಲವನ್ನೂ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು.
  • ನುಗ್ಗೇಕಾಯಿಗಳನ್ನು ಚೆನ್ನಾಗಿ ತೊಳೆದುಕೊಂಡು ತುಂಡು ಮಾಡಿಟ್ಟುಕೊಳ್ಳಿ.
  • ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಖಾರದ ಪುಡಿಯನ್ನು ರುಬ್ಬಿಟ್ಟುಕೊಳ್ಳಿ.
  • ಸ್ವಲ್ಪ ನೀರಿಗೆ ಉಪ್ಪು ಹಾಕಿ ನುಗ್ಗೆಕಾಯಿ ಬೇಯಿಸಿಕೊಳ್ಳಿ. ಬೆಂದ ನುಗ್ಗೆಕಾಯಿದೆ ಬೇಯಿಸಿದ ಬೇಳೆಯನ್ನು ಹಾಕಿ ಮಿಶ್ರಣ ಮಾಡಿ. ನಂತರ ಈಗಾಗಲೇ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ.
  • ಬಳಿಕ ಉಪ್ಪು, ಅರಿಶಿನದ ಪುಡಿ, ಜೀರಿಗೆ ಪುಡಿ ಹಾಗೂ ಟೊಮೆಟೋ ಪ್ಯೂರಿಯನ್ನು ಹಾಕಿ ಕುದಿಯಲು ಬಿಡಿ. ಮಿಶ್ರಣ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ ಕುದಿಸಿದರೆ ರುಚಿಕರವಾದ ನುಗ್ಗೇಕಾಯಿ ದಾಲ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com