ಹೆಸರುಬೇಳೆ ವಡೆ

ರುಚಿಕರವಾದ ಹೆಸರುಬೇಳೆ ವಡೆ ಮಾಡುವ ವಿಧಾನ...
ಹೆಸರುಬೇಳೆ ವಡೆ
ಹೆಸರುಬೇಳೆ ವಡೆ

ಬೇಕಾಗುವ ಪದಾರ್ಥಗಳು

  • ಹೆಸರುಬೇಳೆ- 1 ಬಟ್ಟಲು
  • ಹಸಿಮೆಣಸಿನ ಕಾಯಿ- 2-3
  • ಶುಂಠಿ, ಬೆಳ್ಳುಳ್ಳಿ-ಸ್ವಲ್ಪ
  • ಉಪ್ಪು-ರುಚಿಗೆ ತಕ್ಕಷ್ಟು
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
  • ಅಡುಗೆ ಸೋಡಾ-ಚಿಟಿಕೆಯಷ್ಟು
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು ಒಂದು ಸಣ್ಣ ಬಟ್ಟಲು
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ

ಮಾಡುವ ವಿಧಾನ...

  • ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು 3-5 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು.
  • ನಂತರ ನೀರು ಬಸಿದು, ಇದಕ್ಕೆ ಹಸಿಮೆಣಿಸಿನ ಕಾಯಿ, ಉಪ್ಪು, ಶುಂಠಿ, ಬೆಳ್ಳುಳ್ಳಿ ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಬೇಕು.
  • ಈ ರುಬ್ಬಿಕೊಂಡ ಹೆಸರುಬೇಳೆಗೆ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು, ಅಡುಗೆ ಸೋಡಾವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
  • ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು. ನಂತರ ಮಿಶ್ರಣವನ್ನು ಸಣ್ಣ ಸಣ್ಣೆ ಉಂಡೆ ಮಾಡಿ ಎಣ್ಣೆಗೆ ಬಿಟ್ಟು, ಕೆಂಪಗೆ ಕರಿದರೆ ರುಚಿಕರವಾದ ಹೆಸರುಬೇಳೆ ವಡೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com