ಬೇಳೆ ದೋಸೆ

ರುಚಿಕರವಾದ ಬೇಳೆ ದೋಸೆ ಮಾಡುವ ವಿಧಾನ...

Published: 19th March 2021 11:48 AM  |   Last Updated: 19th March 2021 11:48 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

 • ಹೆಸರುಬೇಳೆ - ಒಂದು ಸಣ್ಣ ಬಟ್ಟಲು
 • ಉದ್ದಿನಬೇಳೆ - ಒಂದು ಸಣ್ಣ ಬಟ್ಟಲು
 • ಕಡಲೆಬೇಳೆ- ಒಂದು ಸಣ್ಣ ಬಟ್ಟಲು
 • ತೊಗರಿಬೇಳೆ - ಒಂದು ಸಣ್ಣ ಬಟ್ಟಲು
 • ಅಕ್ಕಿ- ಒಂದು ಸಣ್ಣ ಬಟ್ಟಲು
 • ಜೀರಿಗೆ- ಒಂದು ಚಮಚ
 • ಒಣಗಿದ ಮೆಣಸಿನ ಕಾಯಿ -4-5

ಮಾಡುವ ವಿಧಾನ...

 • ಹೆಸರುಬೇಳೆ, ಉದ್ದಿನಬೇಳೆ, ಕಡಲೆಬೇಳೆ, ತೊಗರಿಬೇಳೆ, ಅಕ್ಕಿ, ಜೀರಿಗೆ, ಒಣಗಿದ ಮೆಣಸಿನ ಕಾಯಿ ಎಲ್ಲವನ್ನೂ 1 ಗಂಟೆ ಕಾಲ ನೆನೆಸಿಟ್ಟುಕೊಳ್ಳಬೇಕು.
 • ನಂತರ ನೆನೆಸಿದ ಬೇಳೆ, ಅಕ್ಕಿ ಎಲ್ಲವನ್ನೂ ಮಿಕ್ಸಿ ಜಾರ್'ಗೆ ಹಾಕಿ ರುಬ್ಬಿಕೊಳ್ಳಬೇಕು.
 • ನಂತರ ರುಬ್ಬಿಕೊಂಡ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅಡುಗೆ ಸೋಡವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
 • ನಂತರ ಒಲೆಯ ಮೇಲೆ ತವಾ ಇಟ್ಟು ಕಾದ ನಂತರ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಬೇಳೆ ದೋಸೆ ಸವಿಯಲು ಸಿದ್ಧ.
Stay up to date on all the latest ಆಹಾರ-ವಿಹಾರ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp