ಆಲೂ ಮಸಾಲೆ

ರುಚಿಕರವಾದ ಆಲೂ ಮಸಾಲೆ ಮಾಡುವ ವಿಧಾನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೇಕಾಗುವ ಪದಾರ್ಥಗಳು

  • ಆಲೂಗಡ್ಡೆ- ಕಾಲು ಕೆಜಿ
  • ಕೆಂಪು ಮೆಣಸಿನ ಕಾಯಿ-2
  • ಚಕ್ಕೆ (ದಾಲ್ಚಿನ್ನಿ)- ಸ್ವಲ್ಪ
  • ಶುಂಠಿ,ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
  • ಲವಂಗ- 2
  • ದನಿಯಾ ಪುಡಿ- 1 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಖಾರದ ಪುಡಿ- 1 ಚಮಚ
  • ಕೊತ್ತಂಬರಿ ಸೊಪ್ಪು-ಸ್ವಲ್ಪ
  • ಟೊಮೆಟೋ- 2
  • ಜೀರಿಗೆ- ಅರ್ಧ ಚಮಚ

ಮಾಡುವ ವಿಧಾನ...

  • ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಹೋಳುಗಳಾಗಿ ಮಾಡಿಕೊಳ್ಳಿ. 
  • ಜೀರಿಗೆ, ದನಿಯಾ ಪುಡಿಯನ್ನು ಕೆಂಪಗೆ ಹುರಿದುಕೊಂಡು, ಪುಡಿ ಮಾಡಿಕೊಳ್ಳಿ.
  • ಒಲೆಯ ಮೇಲೆ ಬಾಣಲೆಯಿಟ್ಟು ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಟೊಮೆಟೋ ಹಾಗೂ ಜೀರಿಗೆ, ದನಿಯಾ ಪುಡಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
  • ಬೆಂದ ಟೊಮೆಟೋಗೆ ಆಲೂಗಡ್ಡೆ ಹಾಕಿ, ಲವಂಗ, ದಾಲ್ಚಿನ್ನಿ ಕುಟ್ಟಿ ಪುಡಿ ಮಾಡಿ ಹಾಕಿ. 
  • ಬಳಿಕ ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿ 5-10 ನಿಮಿಷ ಕುದಿಸಿದರೆ ರುಚಿಕರವಾದ ಆಲೂ ಮಸಾಲೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com