ಬಿಸ್ಕೆಟ್ ಬರ್ಫಿ

ರುಚಿಕರವಾದ ಬಿಸ್ಕೆಟ್ ಬರ್ಫಿ ಮಾಡುವ ವಿಧಾನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೇಕಾಗುವ ಪದಾರ್ಥಗಳು

  • ಪಾರ್ಲೆಜಿ ಬಿಸ್ಕೆಟ್ - 3 ಪ್ಯಾಕೆಟ್
  • ಸಕ್ಕರೆ - ಅರ್ಧ ಬಟ್ಟಲು
  • ತುಪ್ಪ- ಅರ್ಧ ಕೆಜಿ
  • ಹಾಲಿನ ಪುಡಿ- 1 ಚಮಚ
  • ಹಾಲು- ಅರ್ಧ ಬಟ್ಟಲು
  • ಡ್ರೈಫ್ರೂಟ್ಸ್- ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಒಲೆಯ ಮೇಲೆ ಬಾಣಲೆಯನ್ನು ಇಟ್ಟು, ಅದಕ್ಕೆ ತುಪ್ಪ ಹಾಕಿ ಕಾಯಲು ಬಿಡಿ. ಕಾದ ತುಪ್ಪಕ್ಕೆ ಪಾರ್ಲೆಜಿ ಬಿಸ್ಕೆಟ್ ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಕರಿದುಕೊಳ್ಳಿ.
  • ಬಳಿಕ ತಣ್ಣಗಾಗಲು ಬಿಟ್ಟು ಮಕ್ಸಿ ಜಾರ್'ಗೆ ತುಪ್ಪದಲ್ಲಿ ಕರಿದ ಬಿಸ್ಕೆಟ್ ಗಳನ್ನು ಹಾಕಿ ಪುಡಿ ಮಾಡಿಕೊಳ್ಳಿ
  • ಮತ್ತೊಂದೆಡೆ ಹಾಲಿನ ಪುಡಿಗೆ ಹಾಕಿ ಹಾಲು ಹಾಕಿ ಮಿಶ್ರಣ ಮಾಡಿಕೊಳ್ಳಿ. ಮತ್ತೊಂದು ಬಾಣೆಲೆ ಇಟ್ಟು, ಅದಕ್ಕೆ ಸಕ್ಕರೆ ಹಾಗೂ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಿ. ಪಾಕ ಗಟ್ಟಿಯಾದ ಬಳಿಕ ಹಾಲಿನ ಪುಡಿ ಮಿಶ್ರಣವನ್ನು ಹಾಕಿ ಕುದಿಯಲು ಬಿಡಿ.
  • ಬಳಿಕ ಬಿಸ್ಕೆಟ್ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ 10-15 ನಿಮಿಷ ಕೈಯಾಡಿಸಿ.
  • ಬಳಿಕ ತಟ್ಟೆಯೊಂದಕ್ಕೆ ತುಪ್ಪವನ್ನು ಸವರಿ ಮಿಶ್ರಣವನ್ನು ಹಾಕಿ ಕದಡಿಕೊಂಡು, ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು, ಡ್ರೈಫ್ರೂಟ್ಸ್ ಗಳಿಂದ ಅಲಂಕರಿಸಿದರೆ, ರುಚಿಕರವಾದ ಬಿಸ್ಕೆಟ್ ಬರ್ಫಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com