ತೆಂಗಿನಕಾಯಿ ದೋಸೆ

ರುಚಿಕರವಾದ ತೆಂಗಿನಕಾಯಿ ದೋಸೆ ಮಾಡುವ ವಿಧಾನ...
ತೆಂಗಿನ ಕಾಯಿ ದೋಸೆ
ತೆಂಗಿನ ಕಾಯಿ ದೋಸೆ

ಬೇಕಾಗುವ ಪದಾರ್ಥಗಳು

  • ಅಕ್ಕಿ- 2 ಬಟ್ಟಲು
  • ಮೆಂತ್ಯೆ- 1 ಚಮಚ
  • ತೆಂಗಿನ ಕಾಯಿ ತುರಿ- 1 ಬಟ್ಟಲು
  • ಅವಲಕ್ಕಿ- 1 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ ಹಾಗೂ ಮೆಂತ್ಯೆಯನ್ನು ಹಾಕಿ 4 ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಯಲು ಬಿಡಿ.
  • ಹಿಟ್ಟು ರುಬ್ಬಿಕೊಳ್ಳಲು ಸ್ವಲ್ಪ ಸಮಯವಿರುವಾಗಲೇ ಅವಲಕ್ಕಿಯನ್ನು ನೆನೆಸಿಟ್ಟುಕೊಳ್ಳಿ.
  • ಮಿಕ್ಸಿ ಜಾರ್'ಗೆ ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅವಲಕ್ಕಿ ಹಾಗೂ ತೆಂಗಿನಕಾಯಿ ತುರಿಯನ್ನೂ ನುಣ್ಣಗೆ ರುಬ್ಬಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 8 ಗಂಟೆಗಳ ಕಾಲ ಮುಚ್ಚಿ ಫರ್ಮೆಂಟ್ ಆಗಲು ಇಡಿ.
  • 8 ಗಂಟೆಗಳ ಫರ್ಮೆಂಟೇಶನ್ ನ ನಂತರ, ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ಬಿಸಿ ತವಾ ಮೇಲೆ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಹಾಗೂ ಮೃದುವಾದ ತೆಂಗಿನಕಾಯಿ ದೋಸೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com