ಇಡ್ಲಿಗೆ ಕಡ್ಡಿ ಚುಚ್ಚಿದ್ದರ ಹಿಂದಿನ ಕಥೆ; ಆ ಕುರಿತ ಮಾತುಕತೆಗಳು ಈಗ ಚರ್ಚೆಗೆಯೇ ಆಹಾರ!

ಜನರನ್ನು ಒಗ್ಗೂಡಿಸುವ ಹಾಗೂ ವಿಭಜಿಸುವ ವಿಷಯವೆಂದರೆ ಅದು ಆಹಾರ. ಈ ಬಾರಿ ದಕ್ಷಿಣ ಭಾರತೀಯ ಉಪಹಾರವಾದ ಇಡ್ಲಿಯೇ ಚರ್ಚೆಗೆ ಆಹಾರವಾಗಿದೆ. 
ಪಾಪ್ಸಿಕಲ್ ಇಡ್ಲಿ
ಪಾಪ್ಸಿಕಲ್ ಇಡ್ಲಿ

ಬೆಂಗಳೂರು: ಜನರನ್ನು ಒಗ್ಗೂಡಿಸುವ ಹಾಗೂ ವಿಭಜಿಸುವ ವಿಷಯವೆಂದರೆ ಅದು ಆಹಾರ. ಈ ಬಾರಿ ದಕ್ಷಿಣ ಭಾರತೀಯ ಉಪಹಾರವಾದ ಇಡ್ಲಿಯೇ ಚರ್ಚೆಗೆ ಆಹಾರವಾಗಿದೆ. 

ನೀವೆಲ್ಲರೂ ಇತ್ತೀಚಿನ ದಿನಗಳಲ್ಲಿ ಕಡ್ಡಿ ಚುಚ್ಚಿದ್ದ ಇಡ್ಲಿಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ ಹಾಗೂ ಅಚ್ಚರಿಯಾಗಿರುತ್ತೀರಿ. ಇದೇ ಈಗ ಚರ್ಚೆಗೂ ಗ್ರಾಸವಾಗಿದೆ. 

ಈ ಕಡ್ಡಿ ಚುಚ್ಚಿದ್ದ ಇಡ್ಲಿಗೆ ಪಾಪ್ಸಿಕಲ್ ಇಡ್ಲಿ ಎನ್ನುತ್ತಾರೆ. ಕೆಲವರಿಗೆ ಇದು ಸೃಜನಶೀಲತೆ ಎನಿಸಿದರೆ ಮತ್ತೆ ಕೆಲವರು ಪೀಳಿಗೆಗಳಿಂದ ಇದ್ದ ಉಪಹಾರದ ಚಿತ್ರಣವನ್ನೇ ಬದಲಾಯಿಸಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಮುಂಬೈ ಮೂಲದ ಮನೆಯ ಅಡುಗೆಯವರಾದ ಮಿನಲ್ ಬಧೇಕ ಈ ಕಡ್ಡಿ ಇಡ್ಲಿಯನ್ನು ಸೃಜಿಸಿದ ವ್ಯಕ್ತಿಯಾದರೂ ಇದರ ಕೀರ್ತಿ ದೊರೆತಿದ್ದು ಮಾತ್ರ ಬೆಂಗಳೂರಿಗೆ 

ಸಿಟಿ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಬಧೇಕ ನಾನು ನನ್ನ ಮಗನಿಗೆ ಎಂದಿಗೂ ಎಲ್ಲರೂ ಸಾಮಾನ್ಯವಾಗಿ ಮಾಡಿಕೊಡುವಂತೆ ಇಡ್ಲಿಯನ್ನು ಮಾಡಿಕೊಟ್ಟಿಲ್ಲ. ನಾನು ಓರ್ವ ಬೇಕರ್ ಆದ್ದರಿಂದ ನನ್ನ ಮನೆಯಲ್ಲಿ ಹಲವಾರು ಕೇಕ್ ಮೌಲ್ಡ್ ಗಳಿವೆ. ಎಂದಿನ ಕೇಕ್ ಮೌಲ್ಡ್ ಗಳಿಂದ ಹಿಡಿದು ಮಿಕ್ಕಿ ಮೌಸ್ ಗಳವರೆಗೂ ಇಡ್ಲಿ ತಯಾರಿಕೆಗೆ ಬಳಕೆ ಮಾಡಿ 10 ನೇ ತರಗತಿಯಲ್ಲಿ ಓದುತ್ತಿರುವ ಮಗನಿಗೆ ಕೊಡುತ್ತೇನೆ. ಇದೇ ರೀತಿ ಮಾಡುತ್ತಿದ್ದಾಗ ಸ್ವಾಭಾವಿಕವಾಗಿ ಪಾಪ್ಸಿಕಲ್ ಇಡ್ಲಿಯೂ ತಯಾರಾಯಿತು" ಎನ್ನುತ್ತಾರೆ ಮಿನಲ್ ಬಧೇಕ.

ಆಕೆ ಹೊಸ ರೀತಿಯಲ್ಲಿ ಇಡ್ಲಿ ತಯಾರಿಸಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಆದರೆ ಇದಕ್ಕೆ ಹೇಗೋ ಕೀರ್ತಿ ಪಡೆದಿದ್ದು ಮಾತ್ರ ಬೆಂಗಳೂರಿನ ಹೆಚ್ಎಸ್ಆರ್ ಲೌಟ್ ನಲ್ಲಿರುವ ರೆಸ್ಟೊರೆಂಟ್ ಕೊಲಂಬೊ ಇಡ್ಲಿ ಹೌಸ್. 

ಈ ಬಗ್ಗೆ ಇಡ್ಲಿ ಹೌಸ್ ನ ಮಾಲಿಕರಾದ ಪಂಡಿಯರಾಜ್ ಪೌಲ್ಪಾಂಡಿಯನ್ ಸ್ಪಷ್ಟನೆ ನೀಡಿದ್ದು ಈ ವೈರಲ್ ಆದ ಇಡ್ಲಿಯ ತಯಾರಿಕೆ ಮೂಲ ನಮ್ಮ ಹೊಟೇಲ್ ಅಲ್ಲ, ನಾವೂ ಸಹ ಕಡ್ಡಿ ರೀತಿಯ ಇಡ್ಲಿಯನ್ನು ತಯಾರಿಸುತ್ತೇವೆ. ಆದರೆ ಅದಕ್ಕೆ ಕುಲ್ಫಿ ಮೌಲ್ಡ್ ನ್ನು ಬಳಕೆ ಮಾಡುತ್ತೇವೆ, ಇದು ನಮ್ಮ ರೆಸ್ಟೊರೆಂಟ್ ಪ್ರಾರಂಭವಾದಾಗಿನಿಂದಲೂ ಮೆನುವಿನಲ್ಲಿ ಕಳೆದ 2 ವರ್ಷಗಳಿಂದಲೂ ಇದೆ" ಎನ್ನುತ್ತಾರೆ. 

ಫೋಟೋ ವೈರಲ್ ಆಗತೊಡಗಿದ್ದರಿಂದ ರೆಸ್ಟೊರೆಂಟ್ ಗೆ ಹಲವು ಕರೆಗಳು ಬರುತ್ತಿವೆ ಪ್ರತಿಬಾರಿಯೂ ಸ್ಪಷ್ಟನೆ ನೀಡಬೇಕಾಗಿದೆ ಎಂದು ಪೌಲ್ಪಾಂಡಿಯನ್ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com