ಹಯಗ್ರೀವಾ

ರುಚಿಕರವಾದ ಹಯಗ್ರೀವಾ ಮಾಡುವ ವಿಧಾನ...
ಹಯಗ್ರೀವಾ
ಹಯಗ್ರೀವಾ

ಬೇಕಾಗುವ ಪದಾರ್ಥಗಳು

  • ಕಡಲೆ ಬೇಳೆ - 1 ಬಟ್ಟಲು
  • ನೀರು- 3 ಬಟ್ಟಲು
  • ಬೆಲ್ಲ - 1 ಬಟ್ಟಲು
  • ಲವಂಗ- 4 
  • ತುಪ್ಪ- 2 ಚಮಚ
  • ಗೋಡಂಬಿ - 10
  • ದ್ರಾಕ್ಷಿ - ಸ್ವಲ್ಪ
  • ಏಲಕ್ಕಿ ಪುಡಿ - ಸ್ವಲ್ಪ
  • ತೆಂಗಿನ ತುರಿ- ಅರ್ಧ ಬಟ್ಟಲು

ಮಾಡುವ ವಿಧಾನ...

  • ಮೊದಲಿಗೆ ಪ್ರೆಶರ್ ಕುಕ್ಕರ್ ನಲ್ಲಿ ಕಡಲೆ ಬೇಳೆಯನ್ನು 3 ಕಪ್ ನೀರಿನೊಂದಿಗೆ 5 ಸೀಟಿಗಳೊಂದಿಗೆ ಬೇಯಿಸಿಕೊಳ್ಳಿ. ನಂತರ ಬೇಳೆಯಿಂದ ನೀರನ್ನು ಬಸಿಯಿರಿ. 
  • ಬೇಯಿಸಿದ ಕಡ್ಲೆ ಬೇಳೆಯನ್ನು ದೊಡ್ಡ ಕಡಾಯಿಗೆ ಹಾಕಿಕೊಳ್ಳಿ. ಇದಕ್ಕೆ ಬೆಲ್ಲ, ಲವಂಗ ಹಾಕಿ ಚೆನ್ನಾಗಿ ಮಿಶ್ರಣ ಮಾಡಿರಿ. 
  • ಬೆಲ್ಲ ಕರಗುವ ತನಕ ಮಿಶ್ರಣ ಮಾಡಿ, ಬೆಲ್ಲ ಕರಗಿ ದಪ್ಪವಾಗಲು ಪ್ರಾರಂಭವಾಗುವವರೆಗೆ ಕೈಯಾಡಿಸುತ್ತಲೇ ಇರಿ. 
  • ಮತ್ತೊಂದೆಡೆ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು 2 ಚಮಚ ತುಪ್ಪ, ಗೋಡಂಬಿ, ಒಣದ್ರಾಕ್ಷಿ ಹಾಕಿ ಕೆಂಪಗೆ ಹುರಿದಿಟ್ಟುಕೊಳ್ಳಿ.
  • ಚಿನ್ನದ ಕಂದು ಬಣ್ಣಕ್ಕೆ ಹುರಿದು ಕಡ್ಲೆ ಬೇಳೆ - ಬೆಲ್ಲದ ಮಿಶ್ರಣಕ್ಕೆ ಹಾಕಿರಿ. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ. ತುಪ್ಪದೊಂದಿನ ದ್ರಾಕ್ಷಿ, ಗೋಡಂಬಿ ಹಾಕಿದ ಬಳಿಕ ಮಿಶ್ರಣವು ರೇಷ್ಮೆಯಂತೆ ನಯವಾಗಿರುತ್ತದೆ.
  • ಬಳಿಕ ಏಲಕ್ಕಿ ಪುಡಿ ಮತ್ತು ತೆಂಗಿನಕಾಯಿ ಸೇರಿಸಿ. ಚೆನ್ನಾಗಿ ಬೆರೆಸಿದೆ ರುಚಿಕರವಾಗ ಹಯಗ್ರೀವಾ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com