ಗೋರಿಕಾಯಿ ಆಲೂ ಮೊಟ್ಟೆ ಪಲ್ಯ

ರುಚಿಕರವಾದ ಗೋರಿಕಾಯಿ ಆಲೂ ಮೊಟ್ಟೆ ಪಲ್ಯ ಮಾಡುವ ವಿಧಾನ...
ಗೋರಿಕಾಯಿ ಆಲೂ ಮೊಟ್ಟೆ ಪಲ್ಯ
ಗೋರಿಕಾಯಿ ಆಲೂ ಮೊಟ್ಟೆ ಪಲ್ಯ

ಬೇಕಾಗುವ ಪದಾರ್ಥಗಳು

  • ಗೋರಿಕಾಯಿ- ಕಾಲು ಕೆಜಿ
  • ಅಲೂಗಡ್ಡೆ -2
  • ಮೊಟ್ಟೆ 4-5
  • ಹಸಿಮೆಣಸಿನ ಕಾಯಿ- 3-4
  • ಶುಂಠಿ- ಸ್ವಲ್ಪ
  • ಬೆಳ್ಳುಳ್ಳಿ-ಸ್ವಲ್ಪ
  • ಚಕ್ಕೆ,ಲವಂಗ ಪುಡಿ -ಸ್ವಲ್ಪ
  • ಉಪ್ಪು-ರುಚಿಗೆ ತಕ್ಕಷ್ಟು
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 2
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲಿಗೆ ಗೋರಿಕಾಯಿ, ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಹಣಸಿನ ಕಾಯಿ, ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಮಿಕ್ರಿ ಜಾರ್'ಗೆ ಹಾಕಿ ನೀರು ಹಾಕದಂತೆ ಪೇಸ್ಟ್ ಮಾಡಿಕೊಳ್ಳಬೇಕು.
  • ಒಲೆಯ ಮೇಲೆ ಕುಕ್ಕರ್ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಕಾದ ಬಳಿಕ ಈರುಳ್ಳಿ ಹಾಕಿ. ಕೆಂಪಗಾದ ಬಳಿಕ ಗೋರಿಕಾಯಿ ಹಾಗೂ ಆಲೂಗಡ್ಡೆಯನ್ನು ಹಾಕಿ 2 ನಿಮಿಷ ಹುರಿದುಕೊಳ್ಳಿ.
  • ನಂತರ ರುಬ್ಬಿಕೊಂಡ ಪೇಸ್ಟ್, ಉಪ್ಪು, ಚಕ್ಕೆ, ಲವಂಗ ಪುಡಿ ಎಲ್ಲವನ್ನೂ ಹಾಕಿ ಮುಚ್ಚಳವನ್ನು ಮುಚ್ಚಿ 1 ಕೂಗು ಸಣ್ಣ ಉರಿಯಲ್ಲಿ ಕೂಗಿಸಿಕೊಳ್ಳಿ.
  • ನಂತರ ಮೊಟ್ಟೆಯನ್ನು ಒಡೆದು ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸಿ ಕೆಂಪಗೆ ಹುರಿದುಕೊಂಡರೆ ರುಚಿಕರವಾದ ಗೋರಿಕಾಯಿ ಆಲೂ ಮೊಟ್ಟೆ ಪಲ್ಯ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com