ಟೊಮೆಟೊ ಊತಪ್ಪಂ

ರುಚಿಯಾದ ಟೊಮೆಟೊ ಊತಪ್ಪ ಮಾಡುವ ವಿಧಾನ.
ಟೊಮೆಟೊ ಊತಪ್ಪಂ
ಟೊಮೆಟೊ ಊತಪ್ಪಂ

ಬೇಕಾಗುವ ಪದಾರ್ಥಗಳು:

  • ಗೋಧಿ ಹಿಟ್ಟು: 200 ಗ್ರಾಂ
  • ಕಡಲೆ ಹಿಟ್ಟು: 100 ಗ್ರಾಂ
  • ಗಟ್ಟಿ ಮೊಸರು: 50 ಗ್ರಾಂ
  • ಟೊಮೆಟೊ: 3
  • ಮೊಳಕೆ ಹೆಸರು ಕಾಳು: ಒಂದು ಹಿಡಿ
  • ಮೆಂತ್ಯ ಎಲೆಗಳು: 2 ಹಿಡಿ
  • ಶುಂಠಿ: ಒಂದು ಸಣ್ಣ ತುಂಡು
  • ಮೆಣಸು, ಜೀರಿಗೆ: ತಲಾ 1 ಟೀಸ್ಪೂನ್
  • ಮೆಣಸಿನ ಪುಡಿ: 1 ಟೀಸ್ಪೂನ್
  • ರುಚಿಗೆ ತಕ್ಕಷ್ಟು ಉಪ್ಪು
  • ಬೇಯಿಸಲು ಎಣ್ಣೆ

ಮಾಡುವ ವಿಧಾನ:

  • ಗೋಧಿ ಹಿಟ್ಟು ಮತ್ತು ಕಡಲೆ ಹಿಟ್ಟಿನೊಂದಿಗೆ ದೋಸೆ ಹಿಟ್ಟನ್ನು ತಯಾರಿಸಿ.
  • ಕಾಳುಮೆಣಸು, ಜೀರಿಗೆಯನ್ನು ಪುಡಿ ಮಾಡಿಕೊಂಡು ಸ್ವಲ್ಪ ಉಪ್ಪಿನೊಂದಿಗೆ ಹಿಟ್ಟಿಗೆ ಸೇರಿಸಿ.
  • ಮೆಂತ್ಯ ಎಲೆಗಳು ಮತ್ತು ಶುಂಠಿಯನ್ನು ಕತ್ತರಿಸಿ. ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
  • ಒಂದು ಪಾತ್ರೆಯಲ್ಲಿ, ಕತ್ತರಿಸಿದ ಟೊಮೆಟೊ, ಮೆಂತ್ಯ, ಶುಂಠಿ, ಮತ್ತು ಮೊಳಕೆ ಹೆಸರು ಕಾಳು, ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. 
  • ತವಾವನ್ನು ಬಿಸಿ ಮಾಡಿ. ಅದರ ಮೇಲೆ ಎರಡು ಸಣ್ಣ ಕಪ್ ಹಿಟ್ಟನ್ನು ಸುರಿಯಿರಿ ಮತ್ತು ದಪ್ಪದಾದ ದೋಸೆ ಮಾಡಿ.
  • ಅದರ ಮೇಲೆ ಒಂದು ಕಪ್ ಟೊಮೆಟೊ ಮಿಶ್ರಣವನ್ನು ಹರಡಿ. ಎಣ್ಣೆಯನ್ನು ಹಾಕಿ ಮತ್ತು ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿ. 
  • ನಂತರ ತವಾ ಮೇಲಿಂದ ತೆಗೆದು ಚಟ್ನಿ, ಸಾಗು ಅಥವಾ ಮತ್ತಿತರ ಸೂಕ್ತವಾದ ಭಕ್ಷ್ಯದೊಂದಿಗೆ ಬಿಸಿಬಿಯಾಗಿ ತಿನ್ನಲು ಕೊಡಿ.
<strong>ಬೇಕಾಗುವ ಪದಾರ್ಥಗಳು</strong>
ಬೇಕಾಗುವ ಪದಾರ್ಥಗಳು
<strong>ಟೊಮೆಟೊ ಮಿಶ್ರಣ</strong>
ಟೊಮೆಟೊ ಮಿಶ್ರಣ

- ಅಖಿಲಾ ತ್ಯಾಗರಾಜನ್, ಬೆಂಗಳೂರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com