
ಮೊಹಬ್ಬತ್ ಕಾ ಶರ್ಬತ್
ಬೇಕಾಗುವ ಪದಾರ್ಥಗಳು:
- ತಣ್ಣನೆಯ ಹಾಲು: 1/2 ಕಪ್
- ರೋಸ್ ಸಿರಪ್: 1 ಟೀಸ್ಪೂನ್
- ಕಲ್ಲಂಗಡಿ ರಸ: 1/2 ಕಪ್
- ಕಲ್ಲಂಗಡಿ (ಕತ್ತರಿಸಿದ): 2 ಟೀಸ್ಪೂನ್
- ಐಸ್ ಕ್ಯೂಬ್‌ಗಳು: 2
- ಅಲಂಕರಿಸಲು ಗುಲಾಬಿ ದಳಗಳು
ಮಾಡುವ ವಿಧಾನ:
- ಒಂದು ಲೋಟದಲ್ಲಿ ಹಾಲು, ರೋಸ್ ಸಿರಪ್ ಮತ್ತು ಕಲ್ಲಂಗಡಿ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಕತ್ತರಿಸಿದ ಕಲ್ಲಂಗಡಿ ಮತ್ತು ಐಸ್ ತುಂಡುಗಳನ್ನು ಸೇರಿಸಿ.
- ಗುಲಾಬಿ ದಳಗಳಿಂದ ಅಲಂಕರಿಸಿ.

ಈಗ ಮೊಹಬ್ಬತ್ ಕಾ ಶರ್ಬತ್ ಸವಿಯಲು ಸಿದ್ಧವಾಗಿದೆ.
- ಪ್ರಿಯಾ ಶಿವ, ಚೆನ್ನೈ