ಪಾರ್ಲೆ ಜಿ ಕೇಕ್

ರುಚಿಯಾದ ಪಾರ್ಲೆ ಜಿ ಕೇಕ್ ಮಾಡುವ ವಿಧಾನ.
ಪಾರ್ಲೆ ಜಿ ಕೇಕ್
ಪಾರ್ಲೆ ಜಿ ಕೇಕ್

ಬೇಕಾಗುವ ಪದಾರ್ಥಗಳು:

  • ಪಾರ್ಲೆ ಜಿ ಬಿಸ್ಕೆಟ್: 250 ಗ್ರಾಂ
  • ಹಾಲು: 1.5 ಕಪ್
  • ಸಕ್ಕರೆ: ಅರ್ಧ ಕಪ್ ಗಿಂತ ಸ್ವಲ್ಪ ಕಡಿಮೆ
  • ಬೇಕಿಂಗ್ ಪೌಡರ್: 1 ಟೀಸ್ಪೂನ್
  • ವೆನಿಲ್ಲಾ ಎಸೆನ್ಸ್: 1 ಟೀಸ್ಪೂನ್
  • ಬೆಣ್ಣೆ: ಸ್ವಲ್ಪ

ಮಾಡುವ ವಿಧಾನ:

  • ಬಿಸ್ಕೆಟ್ ಮತ್ತು ಸಕ್ಕರೆಯನ್ನು ಸರಿಯಾಗಿ ಪುಡಿಯಾಗುವವರೆಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
  • ಮಿಶ್ರಣವನ್ನು ಒಂದು ಬೌಲ್‌ಗೆ ಸುರಿದುಕೊಂಡು, ಅದಕ್ಕೆ ಹಾಲು, ಬೇಕಿಂಗ್ ಪೌಡರ್ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಬೇಕಿಂಗ್ ಪ್ಯಾನ್ ಮೇಲೆ ಬೆಣ್ಣೆಯನ್ನು ಹಚ್ಚಿ ಮತ್ತು ಮಿಶ್ರಣವನ್ನು ಅದರೊಳಗೆ ಸುರಿಯಿರಿ.
  • ಓವನ್ ಅನ್ನು ಮೊದಲೇ 180 ಡಿಗ್ರಿ C ತಾಪಮಾನಕ್ಕೆ ಕಾಯಿಸಿಕೊಳ್ಳಿ. ನಂತರ ಅದನ್ನು ಸುಮಾರು 45 ನಿಮಿಷಗಳ ಕಾಲ ಬೇಕ್ ಮಾಡಿ. ಈಗ ನಿಮ್ಮ ಕೇಕ್ ಬೆಂದಿದೆ.
  • ನೀವು ಇದನ್ನು ಪ್ರೆಶರ್ ಕುಕ್ಕರ್‌ನಲ್ಲಿಯೂ ಬೇಯಿಸಬಹುದು. ಸುಮಾರು 10 ನಿಮಿಷಗಳ ಕಾಲ ಸೀಟಿಯಿಲ್ಲದೆ ಮೊದಲೇ ಕಾಯಿಸಿಕೊಂಡು ನಂತರ ಕುಕ್ಕರ್‌ ನಲ್ಲಿ ಇಟ್ಟು ಅದನ್ನು ಬೇಯಿಸಿ.
<strong>ಪಾರ್ಲೆ ಜಿ ಕೇಕ್ ಮಿಶ್ರಣ</strong>
ಪಾರ್ಲೆ ಜಿ ಕೇಕ್ ಮಿಶ್ರಣ

ಪಾರ್ಲೆ ಜಿ ಕೇಕ್ ಅನ್ನು ಸ್ವಲ್ಪ ಐಸ್ ಕ್ರೀಂನೊಂದಿಗೆ ಸೇವಿಸಿದರೆ ರುಚಿ ಬಹಳ.

- ಸಾರಾ ಗ್ರೇಸ್, ಬೆಂಗಳೂರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com