
ಎಗ್ ಚಿಲ್ಲಿ
ಬೇಕಾಗುವ ಪದಾರ್ಥಗಳು:
- ಮೊಟ್ಟೆ: 6
- ಕೆಂಪು ಮೆಣಸಿನ ಪುಡಿ: 1 ಚಮಚದಷ್ಟು
- ಉಪ್ಪು: 1 ಚಮಚದಷ್ಟು
- ಮೈದಾ: ಅರ್ಧ ಕಪ್
- ಕಾರ್ನ್ ಫ್ಲೋರ್: 1/4 ಕಪ್
- ಸೋಯಾ ಸಾಸ್: 1 ಚಮಚದಷ್ಟು
- ರೆಡ್ ಚಿಲ್ಲಿ ಸಾಸ್: 1 ಚಮಚದಷ್ಟು
- ಹಸಿರು ಮೆಣಸಿನಕಾಯಿ: 2
- ಚಿಗುರು ಈರುಳ್ಳಿ ಎಲೆಗಳು
- ಬೆಳ್ಳುಳ್ಳಿ: 5-6, ಕತ್ತರಿಸಿದ್ದು
ಮಾಡುವ ವಿಧಾನ:
- ಮೊಟ್ಟೆಗಳನ್ನು ಕುದಿಸಿ, ಸಿಪ್ಪೆ ತೆಗೆದು, ಪ್ರತಿಯೊಂದನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ. ಒಂದು ಪಾತ್ರೆಯಲ್ಲಿ ಮೈದಾ, ಕಾರ್ನ್ ಫ್ಲೋರ್, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ. ಅಗತ್ಯವಿರುವಷ್ಟು ನೀರು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
- ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮೊಟ್ಟೆಗಳನ್ನು ಹಿಟ್ಟಿನಲ್ಲಿ ಅದ್ದಿ ಮತ್ತು ತಿಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
- ಬಾಣಲೆಯಲ್ಲಿ, 1 ಚಮಚ ಎಣ್ಣೆಯನ್ನು ಹಾಕಿ. ಕತ್ತರಿಸಿದ ಬೆಳ್ಳುಳ್ಳಿಯನ್ನು ಫ್ರೈ ಮಾಡಿ. ಮೆಣಸಿನಕಾಯಿ ಮತ್ತು ಚಿಗುರು ಈರುಳ್ಳಿ ಎಲೆಗಳನ್ನು ಸೇರಿಸಿ ಮತ್ತು ಸ್ವಲ್ಪ ಕಾಲ ಹುರಿಯಿರಿ.
- ಗ್ರೇವಿ ಗಟ್ಟಿಯಾಗಲು ಸೋಯಾ ಸಾಸ್, ಚಿಲ್ಲಿ ಸಾಸ್ ಮತ್ತು ಒಂದು ಚಮಚ ಕಾರ್ನ್ ಫ್ಲೋರ್ ಅನ್ನು ನೀರಿನಲ್ಲಿ ಸೇರಿಸಿ.
- ಒಂದು ನಿಮಿಷ ಹುರಿಯಿರಿ ಮತ್ತು ಹುರಿದ ಮೊಟ್ಟೆಗಳನ್ನು ಸೇರಿಸಿ.
ಈಗ ಬಿಸಿಬಿಸಿಯಾದ ಎಗ್ ಚಿಲ್ಲಿ ತಿನ್ನಲು ಸಿದ್ಧವಾಗಿದೆ.

- ಸಾರಾ ಗ್ರೇಸ್, ಬೆಂಗಳೂರು