
ಬಿಸಿಬೇಳೆ ಬಾತ್ ಪುಡಿ
ಬೇಕಾಗುವ ಪದಾರ್ಥಗಳು
- ಕಡಲೆಬೇಳೆ-1/4 ಬಟ್ಟಲು
- ಉದ್ದಿನ ಬೇಳೆ- 1/4 ಬಟ್ಟಲು
- ದನಿಯಾ-1/2 ಬಟ್ಟಲು
- ಜೀರಿಗೆ- 1 ಚಮಚ
- ಏಲಕ್ಕಿ-6
- ಕಾಳು ಮೆಣಸು-1/2 ಚಮಚ
- ಮೆಂತ್ಯೆ- 1/4 ಚಮಚ
- ಚಕ್ಕೆ- 4
- ಲವಂಗ-8
- ಗಸಗಸೆ- 1 ಚಮಚ
- ಕರಿಬೇವು- 1/2 ಬಟ್ಟಲು
- ಕೊಬ್ಬರಿ- 1/4 ಬಟ್ಟಲು
- ಎಣ್ಣೆ - 1 ಚಮಚ
- ಇಂಗು- 1 ಚಮಚ
- ಬ್ಯಾಡಗಿ ಮೆಣಸಿನಕಾಯಿ- 20
- ಗುಂಟೂರು ಮೆಣಸಿನಕಾಯಿ- 10
ಮಾಡುವ ವಿಧಾನ...
- ಮೊದಲಿಗೆ ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ ಕಡಲೆಬೇಳೆ, ಉದ್ದಿನ ಬೇಳೆ, ದನಿಯಾವನ್ನು ಪ್ರತ್ಯೇಕವಾಗಿ ಸಣ್ಣ ಉರಿಯಲ್ಲಿ ಇಟ್ಟು, ಕೆಂಪಗೆ ಹುರಿದುಕೊಳ್ಳಿ.
- ನಂತರ ಜೀರಿಗೆ, ಏಲಕ್ಕಿ, ಕಾಳು ಮೆಣಸು, ಮೆಂತ್ಯೆ, ಚಕ್ಕೆ, ಲವಂಗ, ಗಸಗಸೆ ಹಾಕಿ ಚೆನ್ನಾಗಿ ಹುರಿದುಕೊಳ್ಳು.
- ನಂತರ ಒಂದು ಚಮಚ ಎಣ್ಣೆ ಹಾಕಿ ಅದು ಕಾದ ನಂತರ ಇಂಗು ಹಾಗೂ ಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಕರಿಬೇವು ಹಾಗೂ ಕೊಬ್ಬರಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಎಲ್ಲವೂ ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಂಡರೆ, ಬಿಸಿಬೇಳೆ ಬಾತ್ ಪುಡಿ ಸಿದ್ಧ. ಇದನ್ನು ಗಾಳಿಯಾಡದ ಗಾಜಿನ ಡಬ್ಬಿಗೆ ಹಾಕಿಟ್ಟುಕೊಂಡರೆ 4 ತಿಂಗಳ ಕಾಲ ಬಳಸಿಕೊಳ್ಳಬಹುದು.