ಕ್ಯಾರೆಟ್‌ ಖೀರ್

ರುಚಿಕರವಾದ ಕ್ಯಾರೆಟ್‌ ಖೀರ್ ಮಾಡುವ ವಿಧಾನ...
ಕ್ಯಾರೆಟ್‌ ಖೀರ್
ಕ್ಯಾರೆಟ್‌ ಖೀರ್

ಬೇಕಾಗುವ ಪದಾರ್ಥಗಳು

  • ತುಪ್ಪ- 1 ಚಮಚ
  • ಗೋಂಡಬಿ, ದ್ರಾಕ್ಷಿ- ಸ್ವಲ್ಪ
  • ಕ್ಯಾರೆಟ್- ತುರಿದದ್ದು 1 ಬಟ್ಟಲು
  • ಹಾಲು- ನಾಲ್ಕು ಬಟ್ಟಲು
  • ಕೇಸರಿ- ಸ್ವಲ್ಪ
  • ಸಕ್ಕರೆ- 2 ಬಟ್ಟಲು
  • ಏಲಕ್ಕಿ ಪುಡಿ- ಸ್ವಲ್ಪ
  • ಪಿಸ್ತಾ- ಸ್ವಲ್ಪ
  • ಹಾಲಿನ ಪುಡಿ- ಅರ್ಧ ಬಟ್ಟಲು

ಮಾಡುವ ವಿಧಾನ...

  • ಒಲೆಯ ಮೇಲೆ ಬಾಣಲೆ ಇಟ್ಟು, ತುಪ್ಪ ಹಾಕಿ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಕೆಂಪಗೆ ಹುರಿದಿಟ್ಟುಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ತುರಿದ ಕ್ಯಾರೆಟ್ ನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ.
  • ಬಣ್ಣ ಬದಲಾದ ಮೇಲೆ 2 ಹಾಲು ಹಾಗೂ ಕೇಸರಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ. ಹಾಲು ದಪ್ಪವಾಗುವವರೆಗೆ ಕುದಿಸಿಕೊಳ್ಳಿ.
  • ಮತ್ತೊಂದು ಪಾತ್ರೆಯಲ್ಲಿ 2 ಬಟ್ಟಲು ಹಾಲು ಹಾಗೂ ಹಾಲಿನ ಪುಡಿ ಮಿಶ್ರಣ ಮಾಡಿ. ಈ ಮಿಶ್ರಣ ದಪ್ಪವಾದ ಮೇಲೆ ಕ್ಯಾರೆಟ್ ಹಾಲಿನ ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ, ಪಿಸ್ತಾ ಹಾಕಿ 5 ನಿಮಿಷ ಕುದಿಸಿದರೆ ಕ್ಯಾರೆಟ್ ಖೀರ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com