ಓಟ್ಸ್ ಮಿಲ್ಕ್ ಶೇಕ್

ರುಚಿಕರವಾದ ಓಟ್ಸ್ ಮಿಲ್ಕ್ ಶೇಕ್ ಮಾಡುವ ವಿಧಾನ...
ಓಟ್ಸ್ ಮಿಲ್ಕ್ ಶೇಕ್
ಓಟ್ಸ್ ಮಿಲ್ಕ್ ಶೇಕ್

ಬೇಕಾಗುವ ಪದಾರ್ಥಗಳು...

  • ಓಟ್ಸ್- 1 ಬಟ್ಟಲು
  • ಖರ್ಜೂರ-  ಬೀಜ ತೆಗೆದದ್ದು 1 ಬಟ್ಟಲು
  • ಐಸ್ ಕ್ಯೂಬ್ಸ್- 5-6
  • ಹಾಲು- 1 ಬಟ್ಟಲು
  • ಫ್ರೆಶ್ ಕ್ರೀಂ- 1 ಚಮಚ

ಮಾಡುವ ವಿಧಾನ...

  • ಓಟ್ಸ್ ಮತ್ತು ಖರ್ಜೂರವನ್ನು ಪ್ರತ್ಯೇಕವಾಗಿ ಬಿಸಿನೀರಿನಲ್ಲಿ ಐದು ನಿಮಿಷ ನೆನೆಸಿ.
  • ನಂತರ ನೀರು ಬಸಿದು ಜ್ಯೂಸ್ ಜಾರ್‌ಗೆ ಹಾಕಿರಿ. ಓಟ್ಸ್ ಜೊತೆಗೆ ಖರ್ಜೂರ, ಐಸ್ ಕ್ಯೂಬ್, ಹಾಲು ಹಾಕಿಕೊಂಡು ನುಣ್ಣಗೆ ಬ್ಲೆಂಡ್ ಮಾಡಿಕೊಳ್ಳಿ.
  • ಗ್ಲಾಸಿಗೆ ವರ್ಗಾಯಿಸಿಕೊಂಡು ಫ್ರೆಶ್ ಕ್ರೀಂನ್ನು ಮೇಲೆ ಸಿಂಪಡಿಸಿದರೆ ರುಚಿಕರವಾದ ಓಟ್ಸ್ ಮಿಲ್ಕ್ ಶೇಕ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com