ಪಾಲಾಕ್ ಸೂಪ್

ರುಚಿಕರವಾದ ಪಾಲಾಕ್ ಸೂಪ್ ಮಾಡುವ ವಿಧಾನ...
ಪಾಲಾಕ್ ಸೂಪ್
ಪಾಲಾಕ್ ಸೂಪ್

ಬೇಕಾಗುವ ಪದಾರ್ಥಗಳು...

ಪಾಲಕ್ ಸೊಪ್ಪು – 2 ಬಟ್ಟಲು
ಹಸಿರು ಬಟಾಣಿ – 1 ಬಟ್ಟಲು
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಶುಂಠಿ – 1 ಇಂಚು
ಹೆಚ್ಚಿದ ಬೆಳ್ಳುಳ್ಳಿ – 2
ಸೀಳಿದ ಹಸಿ ಮೆಣಸಿನಕಾಯಿ – 2
ಹಾಲು – ಅರ್ಧ ಬಟ್ಟಲು
ಕಾರ್ನ್ ಫ್ಲೋರ್ – ಅರ್ಧ ಚಮಚ
ಕರಿಮೆಣಸಿನ ಪುಡಿ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಬೆಣ್ಣೆ – 1 ಚಮಚ
ಕ್ರೀಂ – 2 ಚಮಚ
ಮಾಡುವ ವಿಧಾನ...

  • ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ಹೆಚ್ಚಿಟ್ಟುಕೊಳ್ಳಿ.
  • ಒಂದು ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಬೆಣ್ಣೆ ಬಿಸಿ ಮಾಡಿ ಬಳಿಕ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹಾಕಿ 2-3 ನಿಮಿಷ ಫ್ರೈ ಮಾಡಿ.
  • ಈಗ ಹಸಿರು ಬಟಾಣಿ ಹಾಗೂ ಪಾಲಕ್ ಸೊಪ್ಪು ಹಾಕಿ 1-2 ನಿಮಿಷ ಹುರಿಯಿರಿ.
  • ಈಗ 1 ಕಪ್ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
  • ಬಳಿಕ ಮಧ್ಯಮ ಉರಿಯಲ್ಲಿ 2-3 ನಿಮಿಷ ಆಗಾಗ ಕೈಯಾಡಿಸುತ್ತಾ ಕುದಿಸಿಕೊಳ್ಳಿ. ಈ ಮಿಶ್ರಣ ತಣ್ಣಗಾಗಲು ಬಿಡಿ. ಮಿಶ್ರಣ ಸಂಪೂರ್ಣ ತಣ್ಣಗಾದ ಬಳಿಕ ಅದನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ನಯವಾದ ಪೇಸ್ಟ್ ತಯಾರಿಸಿ.
  • ಈಗ ಪೇಸ್ಟ್ ಅನ್ನು ಮತ್ತೆ ಪ್ಯಾನ್‌ಗೆ ವರ್ಗಯಿಸಿ, ಸ್ವಲ್ಪ ನೀರು ಸೇರಿಸಿ, ಮಧ್ಯಮ ಉರಿಯಲ್ಲಿ ಮಿಶ್ರಣ ಮಾಡುತ್ತಾ ಕುದಿಸಿಕೊಳ್ಳಿ.
  • ಸೂಪ್ ದಪ್ಪವಾಗಿಸಲು ಬಯಸುತ್ತೀರಾದರೆ ಕಾರ್ನ್ ಫ್ಲೋರ್ ಅನ್ನು ಹಾಲಿನಲ್ಲಿ ಹಾಕಿ ಮಿಶ್ರಣ ಮಾಡಿ, ಬಳಿಕ ಸೂಪ್‌ಗೆ ಸೇರಿಸಿ. ನಿಮಗೆ ಸೂಪ್ ದಪ್ಪ ಬೇಡ ಎನಿಸಿದರೆ ಈ ಹಂತವನ್ನು ಬಿಡಬಹುದು.
  • ಈಗ ಸೂಪ್‌ಗೆ ಉಪ್ಪು ಹಾಗೂ ಕರಿಮೆಣಸಿನ ಪುಡಿ ಸೇರಿಸಿ, ಮಿಶ್ರಣ ಮಾಡಿ.
  • ಅಗತ್ಯವಿದ್ದರೆ ಇನ್ನಷ್ಟು ನಿರು ಸೇರಿಸಿ, ಸ್ಥಿರತೆಯನ್ನು ಹೊಂದಿಸಿ. ಬಳಿಕ 4-5 ನಿಮಿಷ ಕುದಿಸಿ. ಕೊನೆಯಲ್ಲಿ ಕ್ರೀಂ ನಿಂದ ಸೂಪ್ ಅನ್ನು ಅಲಂಕರಿಸಿದರೆ ರುಚಿಕರವಾರ ಪಾಲಕ್ ಸೊಪ್ಪಿನ ಸೂಪ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com