
ಸಂಗ್ರಹ ಚಿತ್ರ
ಬೇಕಾಗುವ ಪದಾರ್ಥಗಳು
- ಗೋಧಿಹಿಟ್ಟು – 1 ಬಟ್ಟಲು
- ಓಂ ಕಾಳು – ಕಾಲು ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ತುಪ್ಪ – 4 ಚಮಚ
- ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ಹೂರಣಕ್ಕೆ ಬೇಕಾಗುವ ಪದಾರ್ಥಗಳು
- ಬಟಾಣಿ - (ಬೇಯಿಸಿಕೊಂಡಿದ್ದು) ಅರ್ಧ ಬಟ್ಟಲು
- ಸಾಸಿವೆ- ಸ್ವಲ್ಪ
- ಶುಂಠಿ-ಸ್ವಲ್ಪ
- ಹಸಿಮೆಣಸಿನ ಕಾಯಿ- 1-2
- ಈರುಳ್ಳಿ ಸಣ್ಣಗೆ ಹೆಚ್ಚಿದ್ದು- 1 ಬಟ್ಟಲು
- ಆಲೂಗಡ್ಡೆ- ಬೇಯಿಸಿದ್ದು 2
- ಅಚ್ಚ ಖಾರದ ಪುಡಿ - 1 ಚಮಚ
- ನಿಂಬೆ ರಸ- ಸ್ವಲ್ಪ
- ಗರಂ ಮಸಾಲೆ ಪುಡಿ - ಅರ್ಧ ಚಮಚ
- ಕರಿಬೇವು- ಸ್ವಲ್ಪ
ಮಾಡುವ ವಿಧಾನ...
- ಗೋಧಿಹಿಟ್ಟಿಗೆ ಓಂಕಾಳು, ಉಪ್ಪು, ಮೂರು ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಅಗತ್ಯವಿದ್ದಷ್ಟು ನೀರನ್ನು ಹಾಕಿ ಚಪಾತಿ ಹಿಟ್ಟಿಗಿಂತಲೂ ಗಟ್ಟಿಯಾಗಿ ಚೆನ್ನಾಗಿ ಕಲೆಸಿಟ್ಟುಕೊಳ್ಳಿ.
- ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ. ಅದಕ್ಕೆ ಸಾಸಿವೆಕಾಳು, ಕರಿಬೇವು, ಹಸಿ ಮೆಣಸಿನಕಾಯಿ ಮತ್ತು ಸಣ್ಣಗೆ ಕತ್ತರಿಸಿಕೊಂಡ ಶುಂಠಿಯನ್ನು ಹಾಕಿ ಸ್ವಲ್ಪಹೊತ್ತು ಕರಿಯಿರಿ. ನಂತರ ಇದಕ್ಕೆ ಬೇಯಿಸಿ ಚೆನ್ನಾಗಿ ಹಿಸುಕಿಕೊಂಡ ಆಲೂಗಡ್ಡೆ, ಖಾರದ ಪುಡಿ, ಉಪ್ಪು, ಗರಂ ಮಸಾಲೆ, ಬಟಾಣಿ, ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಒಲೆಯಿಂದ ಕೆಳಗಿಸಿ ತಣ್ಣಗಾದ ಬಳಿಕ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ.
- ಬಳಿಕ ಚೆನ್ನಾಗಿ ನಾದಿದ ಹಿಟ್ಟನ್ನು ಲಟ್ಟಿಸಿ ತ್ರಿಕೋನಾಕಾರ ಬರುವಂತೆ ಮಡಿಸಿ. ಅದರೊಳಗೆ ಹೂರಣ ತುಂಬಿಸಿ ಎಲ್ಲಾ ಕಡೆಯಿಂದಲೂ ಬಂದ್ ಮಾಡಿ. ಮಧ್ಯಮ ಉರಿಯಲ್ಲಿ ಕರಿಯಿರಿ. ಮೈದಾ ಬದಲು ಗೋಧಿಹಿಟ್ಟು ಬಳಸಿದರೆ ಉತ್ತಮ. ಆರೋಗ್ಯಕ್ಕೂ ಒಳ್ಳೆಯದು.