
ಬೆಲ್ಲದ ದೋಸೆ
ಬೇಕಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು- 1 ಬಟ್ಟಲು
- ಗೋಧಿ ಹಿಟ್ಟು- 2 ಬಟ್ಟಲು
- ಬೆಲ್ಲದ ಪುಡಿ- 1.5 ಬಟ್ಟಲು
- ತೆಂಗಿನ ತುರಿ - ಅರ್ಧ ಬಟ್ಟಲು
- ಏಲಕ್ಕಿ ಪುಡಿ- ಸ್ವಲ್ಪ
- ಉಪ್ಪು- ಸ್ವಲ್ಪ
- ಅಡುಗೆ ಸೋಡ- ಸ್ವಲ್ಪ
- ಎಣ್ಣೆ ಅಥವಾ ತುಪ್ಪ- ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ...
- ಮೊದಲಿಗೆ ಪಾತ್ರೆಯೊಂದಕ್ಕೆ ಬೆಲ್ಲವನ್ನು ಹಾಕಿ, ಕಾಯಿಸಿ ಶೋಧಿಸಿಟ್ಟುಕೊಳ್ಳಿ.
- ನಂತರ ಮತ್ತೊಂದು ಪಾತ್ರೆಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಬೆಲ್ಲದ ನೀರು, ಏಲಕ್ಕಿ ಪುಡಿ, ಚಿಟಿಕೆಯಷ್ಟು ಉಪ್ಪು, ಅಡುಗೆ ಸೋಡ ಎಲ್ಲವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
- ತವಾವನ್ನು ಬಿಸಿ ಮಾಡಿಕೊಂಡು ಹಿಟ್ಟನ್ನು ತವಕ್ಕೆ ತೆಳುವಾಗಿ ಹರಡಿ. ದೋಸೆ ಮೇಲೆ ತುಪ್ಪ ಅಥವಾ ಎಣ್ಣೆ ಹಾಕಿ. ಮಧ್ಯಮ ಉರಿಯಲ್ಲಿ ದೋಸೆ ಕೆಂಬಣ್ಣ ಬರುವವರೆಗೆ ಬೇಯಿಸಿದರೆ, ರುಚಿಕರವಾದ ಬೆಲ್ಲದ ದೋಸೆ ಸವಿಲಯು ಸಿದ್ಧ.