ಸಿಹಿ ಬೋಂಡಾ

ರುಚಿಯಾದ ಸಿಹಿ ಬೋಂಡಾ ಮಾಡುವ ವಿಧಾನ.
ಸಿಹಿ ಬೋಂಡಾ
ಸಿಹಿ ಬೋಂಡಾ

ಬೇಕಾಗುವ ಪದಾರ್ಥಗಳು...

  • ಗೋಧಿ ಹಿಟ್ಟು: 1 ಕಪ್
  • ತುರಿದ ತೆಂಗಿನಕಾಯಿ: 1 ಕಪ್
  • ಬೆಲ್ಲ (ಪುಡಿ): 1.5 ಕಪ್
  • ಏಲಕ್ಕಿ ಪುಡಿ: 1/2 ಟೀಚಮಚ
  • ತುಪ್ಪ: 2 ಟೀಚಮಚ
  • ಕರೆಯಲು ಸಾಕಷ್ಟು ಎಣ್ಣೆ

ಮಾಡುವ ವಿಧಾನ...

  • ತೆಂಗಿನಕಾಯಿ ತುರಿ ಮತ್ತು 3/4 ಕಪ್ ಬೆಲ್ಲದೊಂದಿಗೆ ಹೂರಣ ತಯಾರಿಸಿ.
  • ಒಂದು ಕಪ್ ನೀರನ್ನು ಕುದಿಸಿ ಮತ್ತು ಅದರಲ್ಲಿ 3/4 ಕಪ್ ಬೆಲ್ಲವನ್ನು ಕರಗಿಸಿ.
  • ಅದು ತಣ್ಣಗಾದ ನಂತರ ಅದಕ್ಕೆ ಗೋಧಿ ಹಿಟ್ಟು, ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ. ನಂತರ ಇಡ್ಲಿ ಹಿಟ್ಟಿನಂತೆ ಸ್ಥಿರತೆ ಬರುವವರೆಗು ಚೆನ್ನಾಗಿ ಮಿಶ್ರಣ ಮಾಡಿ.
  • ಬಾಣಲೆಯಲ್ಲಿ, ಎಣ್ಣೆಯನ್ನು ಬಿಸಿ ಮಾಡಿ. ಮಧ್ಯಮ ಗಾತ್ರದಲ್ಲಿ ಹೂರಣದ ಉಂಡೆಗಳನ್ನು ಮಾಡಿಕೊಳ್ಳಿ. ಅವುಗಳನ್ನು ಹಿಟ್ಟಿನಲ್ಲಿ ಅದ್ದಿ ಮತ್ತು ಎಣ್ಣೆಯಲ್ಲಿ ಬೇಯಿಸಿ. ಚೆನ್ನಾಗಿ ಬೆಂದ ಮೇಲೆ ಹೊರತೆಗೆಯಿರಿ.

ಈಗ ರುಚಿಯಾದ ಸಿಹಿ ಬೋಂಡಾ ಸಿವಿಯಲು ಸಿದ್ಧವಾಗಿದೆ.

<strong>ಬೇಕಾಗುವ ಪದಾರ್ಥಗಳು</strong>
ಬೇಕಾಗುವ ಪದಾರ್ಥಗಳು
<strong>ತಯಾರಾದ ಹೂರಣ</strong>
ತಯಾರಾದ ಹೂರಣ

- ಅಖಿಲಾ ತ್ಯಾಗರಾಜನ್, ಬೆಂಗಳೂರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com