ಹಾಲಿಟ್ಟು ಪಾಯಸ

ದಕ್ಷಿಣ ಕನ್ನಡ ಮೂಲದ ಹಾಲಿಟ್ಟು ಪಾಯಸ ಮಾಡುವ ವಿಧಾನ.
ಹಾಲಿಟ್ಟು ಪಾಯಸ
ಹಾಲಿಟ್ಟು ಪಾಯಸ

ಬೇಕಾಗುವ ಪದಾರ್ಥಗಳು 

ದೋಸೆ ಅಕ್ಕಿ-1 ಕಪ್ 

ಬೆಲ್ಲ- ಒಂದು ಉಂಡೆ

ತೆಂಗಿನ ಕಾಯಿ ತುರಿ-2 ಕಪ್

ಏಲಕ್ಕಿ-ಪರಿಮಳಕ್ಕೆ

ರುಚಿಗೆ ತಕ್ಕಷ್ಟು ಉಪ್ಪು 

ಮಾಡುವ ವಿಧಾನ-

  • ದೋಸೆ ಅಕ್ಕಿಯನ್ನು ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆ ಹಾಕಿ ಬಸಿದು ಮಿಕ್ಸಿ ಜಾರಿನಲ್ಲಿ ಹಾಕಿ ಸ್ವಲ್ಪ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  • ನಂತರ ಒಂದು ತಳವಿರುವ ಪಾತ್ರೆಗೆ ಹಾಕಿ ಸ್ವಲ್ವ ನೀರು ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಿ.
  • ಹಿಟ್ಟು ಉಂಡೆ ಮಾಡುವ ಹದಕ್ಕೆ ಬರುವವರೆಗೆ ಕಾಯಿಸಿಕೊಳ್ಳಬೇಕು.
  • ನಂತರ ಕೆಳಗಿಳಿಸಿ ತಣಿಯಲು ಬಿಡಿ.
  • ಎರಡು ಕಪ್ ತೆಂಗಿನಕಾಯಿತುರಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ತೆಳು ಬಟ್ಟೆಯಲ್ಲಿ ಕಾಯಿಹಾಲು ಹಿಂಡಿಕೊಳ್ಳಿ. ಮೂರು ಸಲ ಕಾಯಿಹಾಲು ತೆಗೆಯಬೇಕು. 
  • ಇತ್ತ ಹಿಟ್ಟು ಆರಿದ ಮೇಲೆ ಚಕ್ಕುಲಿ ಮಾಡುವ ಮಣೆಯಲ್ಲಿ ಶ್ಯಾವಿಗೆ ಒತ್ತನ್ನು ಹಾಕಿ ಹಿಟ್ಟನ್ನು ಒತ್ತಿಕೊಳ್ಳಿ.
  • ಮೂರನೇ ಸಲ ಹಿಂಡಿದ ಕಾಯಿಹಾಲನ್ನು ಬೇಯಿಸಿಕೊಂಡು ಅದಕ್ಕೆ ಈ ಒತ್ತು ಶ್ಯಾವಿಗೆಯನ್ನು ಹಾಕಿ ಬೇಯಲು ಬಿಡಿ. ನಂತರ ಎರಡನೇ ಸಲ ಹಿಂಡಿದ ಕಾಯಿಹಾಲನ್ನು ಹಾಕಿ, ಹಿಟ್ಟು ಚೆನ್ನಾಗಿ ಬೆಂದ ನಂತರ ಬೆಲ್ಲದ ರವೆ ಮಾಡಿಕೊಂಡು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 
  • ನಂತರ ದಪ್ಪ ಕಾಯಿಹಾಲು ಹಾಕಿ. ಒಂದೈದು ನಿಮಿಷ ಬೇಯಲು ಬಿಡಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಒಲೆಯಿಂದ ಇಳಿಸಿ. ಇದು ದಕ್ಷಿಣ ಕನ್ನಡದ ಸಾಂಪ್ರದಾಯಿಕ ಪಾಯಸವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com