ಆಮ್ಲೆಟ್ ದೋಸೆ

ರುಚಿಯಾದ ಆಮ್ಲೆಟ್ ದೊಸೆ ಮಾಡುವ ವಿಧಾನ.
ಆಮ್ಲೆಟ್ ದೋಸೆ
ಆಮ್ಲೆಟ್ ದೋಸೆ

ಬೇಕಾಗುವ ಪದಾರ್ಥಗಳು:

  • ದೋಸೆ ಹಿಟ್ಟು
  • ಈರುಳ್ಳಿ: 1, ಸಣ್ಣದಾಗಿ ಕತ್ತರಿಸಿದ್ದು
  • ಹಸಿರು ಮೆಣಸಿನಕಾಯಿ: 2
  • ಮೊಟ್ಟೆ: 2
  • ಉಪ್ಪು: 1/2 ಟೀಸ್ಪೂನ್
  • ಕೆಂಪು ಮೆಣಸಿನ ಪುಡಿ: 1/2 ಟೀಸ್ಪೂನ್
  • ಕೊತ್ತಂಬರಿ ಸೊಪ್ಪು: 1 ಟೀಸ್ಪೂನ್

ಮಾಡುವ ವಿಧಾನ:

  • ಒಂದು ಬಟ್ಟಲಿನಲ್ಲಿ, ಮೊಟ್ಟೆ, ಉಪ್ಪು ಮತ್ತು ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಕದಡಿ.
  • ಒಂದು ಪ್ಯಾನ್ ಮೇಲೆ ದೋಸೆ ಹಿಟ್ಟನ್ನು ಹಾಕಿ ನಂತರ ಅದಕ್ಕೆ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ.
  • ನಂತರ, ಚೆನ್ನಾಗಿ ಕದಡಿದ ಮೊಟ್ಟೆಯ ಹಿಟ್ಟನ್ನು ದೋಸೆಯ ಮೇಲೆ ಹಾಕಿ, ಮೊಟ್ಟೆ ಅರೆ-ಬೆಂದ ನಂತರ, ಕೊತ್ತಂಬರಿ ಸೊಪ್ಪನ್ನು ಸೇರಿಸಿ.
  • ದೋಸೆ ಬೆಂದ ನಂತರ, ಪ್ಯಾನ್ ನಿಂದ ತೆಗೆದು ತಟ್ಟೆಗೆ ಹಾಕಿ.

ಈಗ ಬಿಸಿಬಿಯಾದ ಆಮ್ಲೆಟ್ ದೋಸೆ ಸವಿಯಲು ಸಿದ್ಧವಾಗಿದೆ.

<strong>ತಯಾರಾದ ಮೊಟ್ಟೆಯ ಹಿಟ್ಟು</strong>
ತಯಾರಾದ ಮೊಟ್ಟೆಯ ಹಿಟ್ಟು
<strong>ದೋಸೆಯ ಮೇಲೆ ಮೊಟ್ಟೆಯ ಹಿಟ್ಟನ್ನು ಹಾಕುವ ವಿಧಾನ</strong>
ದೋಸೆಯ ಮೇಲೆ ಮೊಟ್ಟೆಯ ಹಿಟ್ಟನ್ನು ಹಾಕುವ ವಿಧಾನ

- ಡಿ.ರುತ್, ಹೈದರಾಬಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com