ರಾಗಿ ಹಾಲು

ರುಚಿಕರ ಹಾಗೂ ಆರೋಗ್ಯಕರವಾದ ರಾಗಿ ಹಾಲು ಮಾಡುವ ವಿಧಾನ...
ರಾಗಿ ಹಾಲು
ರಾಗಿ ಹಾಲು

ಬೇಕಾಗುವ ಪದಾರ್ಥಗಳು

  • ರಾಗಿ- ಅರ್ಧ ಕೆಜಿ
  • ಬಾದಾಮಿ- 15-20
  • ಬೆಲ್ಲ- ಅಗತ್ಯಕ್ಕೆ ತಕ್ಕಷ್ಟು
  • ಏಲಕ್ಕಿ-4
  • ತೆಂಗಿನ ಕಾಯಿ ತುರಿ- ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ರಾಗಿಯನ್ನು ಚೆನ್ನಾಗಿ ತೊಳೆದು 3-4 ಗಂಟೆಗಳ ಕಾಲ ಚೆನ್ನಾಗಿ ನೆನಸಬೇಕು. ಇದೇ ರೀತಿ ಬಾದಾಮಿಯನ್ನು ನೆನೆಸಿ, ಸಿಪ್ಪೆ ತೆಗೆದಿಟ್ಟುಕೊಳ್ಳಬೇಕು.
  • ಮಿಕ್ಸಿ ಜಾರ್'ಗೆ ನೆನೆಸಿಟ್ಟ ರಾಗಿ, ಸಿಪ್ಪೆ ತೆಗೆದ ಬಾದಾಮಿ, ಏಲಕ್ಕಿ ಹಾಗೂ ತೆಂಗಿನ ತುರಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಜಾಲರಿಯಲ್ಲಿ ಹಾಕಿ ಸೋಸಬೇಕು.
  • ಬಳಿಕ ಈ ಹಾಲಿಗೆ ಅಗತ್ಯಕ್ಕೆ ತಕ್ಕಷ್ಟು ಬೆಲ್ಲವನ್ನು ಸೇರಿಸಿ, ಕರಗಿಸಿದರೆ ರುಚಿಕರವಾದ ಹಾಗೂ ಆರೋಗ್ಯಕರವಾದ ರಾಗಿ ಹಾಲು ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com