ಎಲೆಕೋಸು ಪಕೋಡಾ

ರುಚಿಕರವಾದ ಎಲೆಕೋಸು ಪಕೋಡಾ ಮಾಡುವ ವಿಧಾನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೇಕಾಗುವ ಪದಾರ್ಥಗಳು...

  • ಎಲೆಕೋಸು- 1 ಸಣ್ಣ ಗಾತ್ರದ್ದು (ಸಣ್ಣಗೆ ಕತ್ತರಿಸಿದ್ದು)
  • ಉಪ್ಪು- ರುಚಿಗೆ ತಕ್ಕಷ್ಟು
  • ಅರಿಶಿಣದ ಪುಡಿ- ಸ್ವಲ್ಪ
  • ಅಚ್ಚ ಖಾರದ ಪುಡಿ- 1 ಚಮಚ
  • ಜೀರಿಗೆ ಪುಡಿ- ಕಾಲು ಚಮಚ
  • ಗರಂ ಮಸಾಲಾ ಪುಡಿ- ಅರ್ಧ ಚಮಚ
  • ಕಡಲೆಹಿಟ್ಟು- ಒಂದು ಬಟ್ಟಲು
  • ಅಕ್ಕಿ ಹಿಟ್ಟು- ಅರ್ಧ ಬಟ್ಟಲು
  • ಜೋಳದ ಹಿಟ್ಟು- ಕಾಲು ಬಟ್ಟಲು
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಪಾತ್ರೆಯೊಂದಕ್ಕೆ ಮೊದಲಿಗೆ ಸಣ್ಣಗೆ ಹಾಗೂ ಉದ್ದಕ್ಕೆ ಹೆಚ್ಚಿಕೊಂಡ ಎಲೆಕೋಸನ್ನು ಹಾಕಿಕೊಳ್ಳಿ. ಬಳಿಕ ಉಪ್ಪು, ಅರಿಶಿಣದ ಪುಡಿ, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ, ಕಡಲೆಹಿಟ್ಟು, ಅಕ್ಕಿ ಹಿಟ್ಟು, ಜೋಳದ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
  • ಪ್ಯಾನ್ ವೊಂದಕ್ಕೆ 5-6 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಿ. ಈ ಎಣ್ಣೆಯನ್ನು ಮಸಾಲೆ ಮಿಶ್ರಿತ ಎಲೆಕೋಸಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಬಿಸಿ ಎಣ್ಣೆ ಹಾಕಿದಾಗ ಎಲೆಕೋಸು ಮೆತ್ತಗಾಗಿ ಉಂಡೆ ಮಾಡಲು ಸಹಾಯ ಮಾಡುತ್ತದೆ.
  • ನಂತರ ಬಾಣಲೆಗೆ ಎಣ್ಣೆ ಹಾಕಿ, ಅದು ಕಾದ ನಂತರ ಮಿಶ್ರಣವನ್ನು ಉಂಡೆ ಅಥವಾ ಬೇಕಾದ ಆಕಾರ ಮಾಡಿಕೊಂಡು ಎಣ್ಣೆಗೆ ಬಿಟ್ಟು, ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಎಲೆಕೋಸು ಪಕೋಡಾ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com