ದಿಢೀರ್ ಇಡ್ಲಿ

ರುಚಿಕರವಾದ ದಿಢೀರ್ ಇಡ್ಲಿ ಮಾಡುವ ವಿಧಾನ...
ದಿಢೀರ್ ಇಡ್ಲಿ
ದಿಢೀರ್ ಇಡ್ಲಿ

ಬೇಕಾಗುವ ಪದಾರ್ಥಗಳು

  • ಇಡ್ಲಿ ರವೆ- ಒಂದು ಬಟ್ಟಲು
  • ಅವಲಕ್ಕಿ- ಒಂದು ಬಟ್ಟಲು
  • ಮೊಸರು- ಒಂದು ಬಟ್ಟಲು
  • ಬೇಕಿಂಗ್ ಸೋಡಾ- ಅರ್ಧ ಚಮಚ
  • ಎಣ್ಣೆ - ಒಂದು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲಿಗೆ ಇಡ್ಲಿ ರವೆಯನ್ನು ಒಂದು ಪಾತ್ರೆಗೆ ಹಾಕಿ ತೊಳೆದುಕೊಳ್ಳಿ. ಮತ್ತೆ ಸ್ವಲ್ಪ ನೀರು ಹಾಕಿ 10 ನಿಮಿಷ ನೆನೆಯಲು ಬಿಡಿ.
  • ಮತ್ತೊಂದು ಪಾತ್ರೆಗೆ ಅವಲಕ್ಕಿ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ತೊಳೆದ ಅವಲಕ್ಕಿಗೆ ಮೊಸರು ಹಾಕಿ 10 ನಿಮಿಷ ನೆನೆಯಲು ಬಿಡಿ.
  • ನೆನೆದ ಅವಲಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ನೆನೆಸಿದ ಇಡ್ಲಿ ರವೆಯನ್ನು ಚೆನ್ನಾಗಿ ಇಂಡಿ ನೀರು ಇಲ್ಲದಂತೆ ಮಾಡಿ ಇದನ್ನು ರುಬ್ಬಿಕೊಂಡ ಅವಲಕ್ಕಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೇಕಿಂಗ್ ಸೋಡಾ ಹಾಗೂ ಉಪ್ಪು ಹಾಕಿ 10 ನಿಮಿಷ ಹಿಟ್ಟು ಹುದುಗಲು ಬಿಡಿ.
  • ನಂತರ ಇಡ್ಲಿ ತಟ್ಟೆಗೆ ಎಣ್ಣೆಯನ್ನು ಹಚ್ಚಿ, ಹಿಟ್ಟನ್ನು ಹಾಕಿ 10 ನಿಮಿಷಗಳ ಕಾಲ ಸ್ಟೀಮ್‌ನಲ್ಲಿ ಬೇಯಿಸಿ. ಅಂತಿಮವಾಗಿ, ಮೃದುವಾದ ಹಾಗೂ ರುಚಿಕರವಾದ ದಿಢೀರ್ ಇಡ್ಲಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com