ಗೋಡಂಬಿ ಚಕ್ಕುಲಿ

ರುಚಿಕರವಾದ ಗೋಡಂಬಿ ಚಕ್ಕುಲಿ ಮಾಡುವ ವಿಧಾನ...
ಗೋಡಂಬಿ ಚಕ್ಕುಲಿ
ಗೋಡಂಬಿ ಚಕ್ಕುಲಿ

ಬೇಕಾಗುವ ಪದಾರ್ಥಗಳು...

  • ಹುರಿಗಡಲೆ – 1/3 ಬಟ್ಟಲು
  • ಗೋಡಂಬಿ – 1/3 ಬಟ್ಟಲು
  • ನೀರು – 1/3 ಬಟ್ಟಲು
  • ಅಕ್ಕಿಹಿಟ್ಟು – 1 ಬಟ್ಟಲು
  • ಇಂಗು – ಚಿಟಿಕೆ
  • ಕಪ್ಪು ಎಳ್ಳು – 1 ಚಮಚ
  • ಅಚ್ಛ ಖಾರದಪುಡಿ – 1/3 ಚಮಚ
  • ತುಪ್ಪ – 1 ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ – ಕರಿಯಲು

ಮಾಡುವ ವಿಧಾನ...

  • ಮೊದಲು 1/3 ಬಟ್ಟಲು ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ ಪಾತ್ರೆಗೆ ಹಾಕಿಕೊಳ್ಳಿ.
  • ನಂತರ 1/3 ಬಟ್ಟಲು ಗೋಡಂಬಿ ,1/3 ಬಟ್ಟಲು ನೀರು ಹಾಕಿ ನುಣ್ಣಗೆ ರುಬ್ಬಿ ಅದೇ ಪಾತ್ರೆಗೆ ಹಾಕಿಕೊಳ್ಳಿ.
  • ಗೋಡಂಬಿ ಪೇಸ್ಟ್ ಮತ್ತು ಹುರಿಗಡಲೆ ಪುಡಿ ಎರಡನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಇದಕ್ಕೆ 1 ಬಟ್ಟಲು ಅಕ್ಕಿ ಹಿಟ್ಟು, ಚಿಟಿಕೆ ಇಂಗು, 1 ಚಮಚ ಕಪ್ಪು ಎಳ್ಳು, 1/3 ಚಮಚ ಅಚ್ಛ ಖಾರದಪುಡಿ , 1 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
  • ನಂತರ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಮೆತ್ತಗೆ ಹಿಟ್ಟನ್ನು ತಯಾರಿಸಿ. ಹಿಟ್ಟು ತುಂಬಾ ಒಣಗಂತೆ ನೋಡಿಕೊಳ್ಳಿ. ಹಿಟ್ಟು ಒಣಗಿದ್ದೇ ಆದರೆ, ಎಣ್ಣೆಯಲ್ಲಿ ಹಾಕಿದಾಗ ಚಕ್ಕುಲಿ ಒಡೆಯುತ್ತದೆ.
  • ನಂತರ ಚಕ್ಕುಲಿ ಅಂಚಿಗೆ ಎಣ್ಣೆ ಸವರಿ ಅದರಲ್ಲಿ ಹಿಟ್ಟನ್ನು  ತುಂಬಿಸಿ. ಕಾಯ್ದ ಎಣ್ಣೆಯಲ್ಲಿ ಚಕ್ಕುಲಿಯನ್ನು ಒತ್ತಿ. ಎರಡೂ ಬದಿ ಕಂದು ಬಣ್ಣ ಬರುವವರೆಗೂ ಹಾಗೂ ಗರಿಗರಿಯಾಗುವವರೆಗೂ ಕರಿಯಿರಿ ರುಚಿಕರವಾದ ಗೋಡಂಬಿ ಚಕ್ಕುಲಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com