ತೆಂಗಿನಕಾಯಿ ಬೆಲ್ಲದ ಬರ್ಫಿ

ರುಚಿಕರವಾದ ತೆಂಗಿನಕಾಯಿ ಬೆಲ್ಲದ ಬರ್ಫಿ ಮಾಡುವ ವಿಧಾನ...
ತೆಂಗಿನಕಾಯಿ ಬೆಲ್ಲದ ಬರ್ಫಿ
ತೆಂಗಿನಕಾಯಿ ಬೆಲ್ಲದ ಬರ್ಫಿ

ಬೇಕಾಗುವ ಪದಾರ್ಥಗಳು

  • ತೆಂಗಿನ ಕಾಯಿ ತುರಿ - ಒಂದು ಬಟ್ಟಲು
  • ಬೆಲ್ಲ- ಒಂದು ಬಟ್ಟಲು
  • ಏಲಕ್ಕಿ ಪುಡಿ- ಅರ್ಧ ಚಮಚ
  • ತುಪ್ಪ- 2 ಚಮಚ
  • ಕೋವಾ- ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಎರಡು ಚಮಚ ತುಪ್ಪ ಹಾಕಿ ಕಾದ ನಂತರ ತೆಂಗಿನ ತುರಿ ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಿ.
  • ಮತ್ತೊಂದು ಪಾತ್ರೆಗೆ ಸ್ವಲ್ಪ ನೀರು ಹಾಗೂ ಬೆಲ್ಲವನ್ನು ಹಾಕಿ ಬೆಲ್ಲವನ್ನು ಕರಗಿಸಿಕೊಳ್ಳಿ. ಕರಗಿದ ಬೆಲ್ಲವನ್ನು ಶೋಧಿಸಿಕೊಂಡು ತೆಂಗಿನ ತುರಿಗೆ ಹಾಕಿ ತಳಹತ್ತದಂತೆ ಕೈಯಾಡಿಸುತ್ತಿರಿ. ಪಾಕ ಗಟ್ಟಿಯಾಗುತ್ತಿದ್ದಂತೆಯ ಇದಕ್ಕೆ ಏಲಕ್ಕಿ ಪುಡಿ ಹಾಗೂ ಕೋವಾ ಹಾಕಿ.
  • ತಟ್ಟೆಯೊಂದಕ್ಕೆ ತುಪ್ಪ ಸವರಿ, ಈ ಪಾಕವನ್ನು ಸುರಿದು ಬೇಕಾದ ಆಕಾರಕ್ಕೆ ಕತ್ತರಿಸಿ, ಆರಲು ಬಿಟ್ಟರೆ ರುಚಿಕರವಾದ ತೆಂಗಿನಕಾಯಿ ಬೆಲ್ಲದ ಬರ್ಫಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com