
ಡ್ರೈ ಗೋಬಿ ಮಂಚೂರಿ
ಬೇಕಾಗುವ ಪದಾರ್ಥಗಳು
- ಮೈದಾ ಹಿಟ್ಟು-ಅರ್ಧ ಬಟ್ಟಲು
- ಜೋಳದ ಹಿಟ್ಟು- ಕಾಲು ಬಟ್ಟಲು
- ಅಚ್ಚ ಖಾರದ ಪುಡಿ- 1 ಚಮಚ
- ಗರಂ ಮಸಾಲೆ ಪುಡಿ- ಅರ್ಧ ಚಮಚ
- ಉಪ್ಪು-ರುಚಿಗೆ ತಕ್ಕಷ್ಟು
- ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಫುಡ್ ಕಲರ್- ಚಿಟಿಕೆಯಷ್ಟು
- ಹೂಕೋಸು (ಗೋಬಿ) - ದೊಡ್ಡ ಗಾತ್ರದ್ದು 1
- ಅರಿಶಿಣದಪುಡಿ-ಸ್ವಲ್ಪ
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ...
- ಮೊದಲಿಗೆ ಒಲೆಯ ಮೇಲೆ ಒಂದು ಪಾತ್ರೆ ಇಟ್ಟು, ಸಣ್ಣಗೆ ಬಿಡಿಸಿದ ಹೂಕೋಸು ಉಪ್ಪು, ಅರಿಶಿಣದ ಪುಡಿ ಹಾಕಿ 5-10 ನಿಮಿಷ ಬೇಯಿಸಿಕೊಳ್ಳಿ.
- ನಂತರ ಈ ಹೂಕೋಸಿಗೆ ಮೈದಾಹಿಟ್ಟು, ಕಾರ್ನ್ ಫ್ಲೋರ್ ಅಥವಾ ಜೋಳದ ಹಿಟ್ಟು, ಅಚ್ಚ ಖಾರದ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಫುಡ್ ಕಲಪ್ ಹಾಗೂ ಉಪ್ಪು, ಸ್ವಲ್ಪ ಸ್ವಲ್ಪ ನೀರು ಚುಮುಕಿಸಿಕೊಂಡು ಕಲಸಿಕೊಳ್ಳಿ.
- ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಕಾದ ನಂತರ ಹೂಕೋಸುಗಳನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಡ್ರೈ ಗೋಬಿ ಸವಿಯಲು ಸಿದ್ಧ.