ರವೆ ಹಲ್ವಾ

ರುಚಿಕರವಾದ ರವೆ ಹಲ್ವಾ ಮಾಡುವ ವಿಧಾನ...
ರವೆ ಹಲ್ವಾ
ರವೆ ಹಲ್ವಾ

ಬೇಕಾಗುವ ಪದಾರ್ಥಗಳು

  • ಸಣ್ಣ ರವೆ- 1 ಬಟ್ಟಲು
  • ಏಲಕ್ಕಿ ಪುಡಿ- ಸ್ವಲ್ಪ
  • ಗೋಡಂಬಿ, ಪಿಸ್ತಾ- ಸಣ್ಣಗೆ ಹೆಚ್ಚಿದ್ದು- ಸ್ವಲ್ಪ
  • ಸಕ್ಕರೆ - ಒಂದು ಬಟ್ಟಲು
  • ಕೇಸರಿ ದಳ- ಸ್ವಲ್ಪ
  • ತುಪ್ಪ- ಒಂದು ಬಟ್ಟಲು

ಮಾಡುವ ವಿಧಾನ...

  • ಮೊದಲಿಗೆ ಒಲೆಯ ಮೇಲೆ ಒಂದು ಪಾತ್ರೆಯಿಟ್ಟು, ಅದಕ್ಕೆ 2 ಬಟ್ಟಲು ನೀರು ಹಾಕಿ ಕಾಯಲು ಬಿಡಬೇಕು. ನಂತರ ಅದಕ್ಕೆ ಸಕ್ಕರೆ, ಏಲಕ್ಕಿ, ಗೋಡಂಬಿ, ಪಿಸ್ತಾ, ಕೇಸರಿದಳ ಹಾಕಿ 5-10 ನಿಮಿಷ ಕುದಿಸಿಕೊಳ್ಳಿ.
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ. ಕಾದ ನಂತರ ರವೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ತುಪ್ಪದಲ್ಲಿಯೇ ರವೆ ಕುದಿಯಲು ಆರಂಭಿಸಬೇಕು. ಇದಕ್ಕೆ ಈಗಾಗಲೇ ಕುದಿಸಿಕೊಂಡ ಪಾಕದ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಸಣ್ಣ ಉರಿಯಲ್ಲಿಟ್ಟು ಬೇಯಿಸಿದರೆ ರುಚಿಕರವಾದ ರವೆ ಹಲ್ವಾ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com