ಆಲೂ ರವಾ ಫ್ರೈ

ರುಚಿಕರವಾದ ಆಲೂ ರವಾ ಫ್ರೈ ಮಾಡುವ ವಿಧಾನ...
ಆಲೂ ರವಾ ಫ್ರೈ
ಆಲೂ ರವಾ ಫ್ರೈ

ಬೇಕಾಗುವ ಪದಾರ್ಥಗಳು

  • ಆಲೂಗಡ್ಡೆ – 2-3
  • ಎಣ್ಣೆ – ಅಗತ್ಯವಿದ್ದಷ್ಟು
  • ಅಚ್ಚ ಖಾರದ ಪುಡಿ - 2-3 ಚಮಚ
  • ಅರಿಶಿಣದ ಪುಡಿ- ಸ್ವಲ್ಪ
  • ಇಂಗು- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ರವೆ- 1 ಬಟ್ಟಲು
  • ಕಾಳು ಮೆಣಸಿನ ಪುಡಿ- ಅರ್ಧ ಚಮಚ

ಮಾಡುವ ವಿಧಾನ...

  • ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ತೆಗೆದು, ತೆಳುವಾದ ಸ್ಲೈಸ್‌ಗಳಾಗಿ ಕತ್ತರಿಸಿ, ನೀರಿನಲ್ಲಿ ನೆನೆಸಿ.
  • ಬಳಿಕ ಒಂದು ಪಾತ್ರೆಯಲ್ಲಿ ಉಪ್ಪು, 1 ಚಮಚ ಖಾರದ ಪುಡಿ, ಅರಿಶಿಣದ ಪುಡಿ, ಇಂದು ಹಾಗೂ ಸ್ವಲ್ಪ ನೀರು ಸೇರಿದ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.
  • ನಂತರ ನೆನೆಸಿಟ್ಟ ಆಲೂಗಡ್ಡೆ ಪೀಸ್ ಗಳನ್ನು ತೆಗೆದು ಮಸಾಲೆ ಹಚ್ಚಿ, 15 ನಿಮಿಷ ಪಕ್ಕಕ್ಕಿಡಿ.
  • ಮತ್ತೊಂದು ಪಾತ್ರೆ ತೆಗೆದುಕೊಂಡು ಮದಕ್ಕೆ ರವೆ, ಖಾರದ ಪುಡಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಈಗ ಮಸಾಲೆ ಹಚ್ಚಿ ನೆನೆಸಿಟ್ಟ ಆಲೂಗಡ್ಡೆ ಪೀಸ್ ಗಳನ್ನು ಒಂದೊಂದಾಗಿ ತೆಗೆದುಕೊಂಡು ಮಿಶ್ರಣದಲ್ಲಿ ಹಾಕಿ. ರವೆ ಕೋಟ್ ಆಲೂ ಪೀಸ್ ಗಳಿಗೆ ಸಂಪೂರ್ಣವಾಗಿ ಅಂಟಿಕೊಳ್ಳುವಂತೆ ಮಾಡಿ.
  • ನಂತರ ತವಾದಲ್ಲಿ ಎಣ್ಣೆ ಬಿಸಿ ಮಾಡಿ, ಆಲೂಗಡ್ಡೆ ಪೀಸ್ ಗಳನ್ನು ಅದರಲ್ಲಿಟ್ಟು ಎರಡೂ ಬದಿಯಲ್ಲೂ ಚಿನ್ನದ ಬಣ್ಣ ಬರುವವರೆದೆ ಫ್ರೈ ಮಾಡಿದರೆ ರುಚಿಕರವಾದ ಆಲೂ ರವಾ ಫ್ರೈ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com