ಬ್ರೆಡ್ ಕೀರ್ ಟೋಸ್ಟ್

ರುಚಿಕರವಾದ ಬ್ರೆಡ್ ಕೀರ್ ಟೋಸ್ಟ್ ಮಾಡುವ ವಿಧಾನ...
ಬ್ರೆಡ್ ಕೀರ್ ಟೋಸ್ಟ್
ಬ್ರೆಡ್ ಕೀರ್ ಟೋಸ್ಟ್

ಬೇಕಾಗುವ ಪದಾರ್ಥಗಳು

  • ಬ್ರೆಡ್ ಪೀಸ್ ಗಳು 4-5
  • ಸಕ್ಕರೆ- 220 ಗ್ರಾಂ
  • ಎಣ್ಣೆ -ಕರಿಯಲು ಅಗತ್ಯವಿದ್ದಷ್ಟು
  • ಹಾಲು- ಒಂದು ಬಟ್ಟಲು
  • ಹಾಲಿನ ಪುಡಿ- ಅರ್ಧ ಬಟ್ಟಲು

ಮಾಡುವ ವಿಧಾನ...

  • ಮೊದಲಿಗೆ ಬ್ರೆಡ್ ಪೀಸ್ ಗಳನ್ನು ತೆಗೆದುಕೊಂಡು ಬದಿಯಲ್ಲಿರುವ ಬ್ರೌನ್ ಕಲರ್ ಕಟ್ ಮಾಡಿ. ನಂತರ ಸಣ್ಣ ಸಣ್ಣ ಪೀಸ್ ಗಳಾಗಿ ಕತ್ತರಿಸಿಕೊಳ್ಳಿ.
  • ಒಲೆಯ ಮೇಲೆ ಪಾತ್ರ್ ಇಟ್ಟು, ಸ್ವಲ್ಪ ನೀರು ಹಾಕಿ, ಸಕ್ಕರೆ ಪಾಕ ಮಾಡಿಕೊಳ್ಳಿ.
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಿ. ಕಾದ ನಂತರ ಬ್ರೆಡ್ ಪೀಸ್ ಗಳನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದುಕೊಂಡು, ಸಕ್ಕರೆ ಪಾಕಕ್ಕೆ ಹಾಕಿ 2-3 ನಿಮಿಷ ನೆನೆಸಿ ತೆಗೆದಿಟ್ಟುಕೊಳ್ಳಿ
  • ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು, ಹಾಲು ಹಾಗೂ ಹಾಲಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಹಾಲು ಗಟ್ಟಿಯಾಗಿ ಕ್ರೀಮ್ ಹದಕ್ಕೆ ಬಂದ ನಂತರ ತಣ್ಣಗಾಗಲು ಬಿಡಿ. ನಂತರ ಎರಡು ಬ್ರೆಡ್ ಪೀಸ್ ಗಳ ಮಧ್ಯೆ ಕ್ರೀಮ್ ಹಚ್ಚಿ ಅಂಟಿಸಿದರೆ ರುಚಿಕರವಾದ ಬ್ರೆಡ್ ಕೀರ್ ಟೋಸ್ಟ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com