ಬೂದು ಕುಂಬಳಕಾಯಿ ಬರ್ಫಿ

ರುಚಿಕರವಾದ ಬೂದು ಕುಂಬಳಕಾಯಿ ಬರ್ಫಿ ಮಾಡುವ ವಿಧಾನ...
ಬೂದು ಕುಂಬಳಕಾಯಿ ಬರ್ಫಿ
ಬೂದು ಕುಂಬಳಕಾಯಿ ಬರ್ಫಿ

ಬೇಕಾಗುವ ಪದಾರ್ಥಗಳು...

  • ಬೂದು ಕುಂಬಳಕಾಯಿ- ಒಂದು
  • ಸಕ್ಕರೆ- 1.5 ಬಟ್ಟಲು
  • ಏಲಕ್ಕಿ ಪುಡಿ- ಅರ್ಧ ಚಮಚ
  • ಕೇಸರಿ ದಳ- ಸ್ವಲ್ಪ
  • ಕೋವಾ- ಸ್ವಲ್ಪ
  • ಟೂಟಿ ಫ್ರೂಟಿ- 1 ಸಣ್ಣ ಬಟ್ಟಲು

ಮಾಡುವ ವಿಧಾನ...

  • ಮೊದಲಿಗೆ ಬೂದು ಕುಂಬಳಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಉದ್ದಕ್ಕೆ ನಾಲ್ಕು ಭಾಗಗಳಾಗಿ ಕತ್ತರಿಸಿಕೊಳ್ಳಿ. ನಂತರ ಬೀಜ ಹಾಗೂ ತಿರುಳನ್ನು ತೆಗೆದು, ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ. ನಂತರ ಸ್ಲೈಸರ್ ನಲ್ಲಿ ತೆಳ್ಳಗೆ ವೃತ್ತಾಕಾರದಲ್ಲಿ ಸ್ಲೈಸ್ ಮಾಡಿಕೊಳ್ಳಿ. ಈ ಸ್ಲೈಸ್ ಗಳನ್ನು ಸುಣ್ಣದ ನೀರಿನಲ್ಲಿ 1-2 ಗಂಟೆಗಳ ಕಾಲ ನೆನೆಸಿಡಿ.
  • ಒಲೆಯ ಮೇಲೆ ಪಾತ್ರೆ ಇಟ್ಟು ಅದಕ್ಕೆ ಸಕ್ಕರೆ ಹಾಗೂ 1 ಲೋಟ ನೀರು ಹಾಕಿ. ಸಕ್ಕರೆ ಕರಗಿದ ಬಳಿಕ ಅದಕ್ಕೆ ಏಲಕ್ಕಿ ಪುಡಿ ಹಾಗೂ ಕೇಸರಿ ದಳ ಹಾಕಿ 5-8 ನಿಮಿಷ ಕುದಿಯಲು ಬಿಡಿ, ಒಂದೆಳೆ ಪಾಕವಾಗಬೇಕು.
  • ನಂತರ ಈಗಾಗಲೇ ನೆನೆಸಿಟ್ಟ ಬೂದಕುಂಬಳಕಾಯಿ ಸ್ಲೈಸ್ ಗಳನ್ನು ತೆಗೆದು 3-4 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ಬಳಿಕ ಒಲೆಯ ಮೇಲೆ ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ನೀರು ಹಾಕಿ ಈ ಸ್ಲೈಸ್ ಗಳನ್ನು ಹಾಕಿ 8-10 ನಿಮಿಷಗಳ ಕಾಲ ಶೇ.80ರಷ್ಟು ಭಾಗ ಬೇಯಲು ಬಿಡಿ. ಬಳಿಕ ನೀರು ಬಸಿದು ಸ್ಪೈಸ್ ಗಳಿಂದ ನೀರುನ್ನು ತೆಗೆದಿಡಿ. ಈ ಸ್ಲೈಸ್ ಗಳನ್ನು ತಣ್ಣಗಾದ ಪಾಕಕ್ಕೆ ಹಾಕಿ 2-3 ಗಂಟೆಗಳ ಕಾಲ ಪಾಕದಲ್ಲಿ ನೆನೆಯಲು ಬಿಡಿ.
  • ನಂತರ ಒಂದು ಬಾಣಲೆಗೆ ಕೋವಾ ಹಾಗೂ ಟ್ಯೂಟಿಫ್ರೂಟಿ ಹಾಕಿ 2 ನಿಮಿಷ ಕೈಯಾಡಿಸಿ ಉಂಡೆಗಳನ್ನಾಗಿ ಮಾಡಿಕೊಳ್ಳಿ.
  • ಈಗಾಗಲೇ ಪಾಕದಲ್ಲಿ ನೆನೆಸಿಟ್ಟ ಸ್ಲೈಸ್ ಗಳನ್ನು ತೆಗೆದುಕೊಳ್ಳಿ. ಎರಡು ಸ್ಲೈಸ್ ಗಳ ಮಧ್ಯೆ ಕೋವಾ-ಟ್ಯೂಟಿಫ್ಲೂಟಿ ಉಂಡೆಗಳನ್ನಿಟಿ. ಫ್ರಿಡ್ಜ್ ನಲ್ಲಿ 2-3 ಗಂಟೆಗಳ ಕಾಲ ಇಟ್ಟರೆ ರುಚಿಕರವಾದ ಬೂದುಕುಂಬಳಕಾಯಿ ಬರ್ಫಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com