ಬಾಳೆಹಣ್ಣಿನ ಕೇಸರಿಬಾತ್

ರುಚಿಕರವಾದ ಬಾಳೆಹಣ್ಣಿನ ಕೇಸರಿಬಾತ್ ಮಾಡುವ ವಿಧಾನ...
ಬಾಳೆಹಣ್ಣಿನ ಕೇಸರಿಬಾತ್
ಬಾಳೆಹಣ್ಣಿನ ಕೇಸರಿಬಾತ್

ಬೇಕಾಗುವ ಪದಾರ್ಥಗಳು...

  • ರವೆ: 1/2 ಬಟ್ಟಲು
  • ಸಕ್ಕರೆ: 1/2 ಬಟ್ಟಲು
  • ಬಾಳೆಹಣ್ಣು: 1
  • ತುಪ್ಪ: 1/4 ಬಟ್ಟಲು
  • ನೀರು: 1 ಬಟ್ಟಲು
  • ಕೇಸರಿ ಬಣ್ಣ: 1/8 ಚಮಚ
  • ಒಣದ್ರಾಕ್ಷಿ: 8
  • ಏಲಕ್ಕಿ ಪುಡಿ- ಸ್ವಲ್ಪ
  • ಕತ್ತರಿಸಿದ ಗೋಡಂಬಿ: 8

ಮಾಡುವ ವಿಧಾನ...

  • ಕೇಸರಿ ಬಣ್ಣವನ್ನು 1 ಚಮಚ ನೀರಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ಬಾಳೆಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ನುಣ್ಣಗೆ ಮಾಡಿಕೊಳ್ಳಿ. ಬಾಣಲೆಗೆ 1 ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ, ನಂತರ ಇದಕ್ಕೆ ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಹಾಕಿ ಕೆಂಪಗಾಗುವವರೆಗೆ ಹುರಿದುಕೊಂಡು ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ.
  • ಅದೇ ಬಾಣಲೆಗೆ ರವೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಹುರಿದುಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ.
  • ಬಾಣಲೆಗೆ ನೀರನ್ನು ಸೇರಿಸಿ ಹಾಕಿ. ಅದು ಕುದಿಯಲು ಆರಂಭಿಸಿದಾಗ. ಕೇಸರಿ ಬಣ್ಣದ ನೀರನ್ನು ಹಾಕಿ ಮಿಶ್ರಣ ಮಾಡಿ. ನಂತರ ನಿಧಾನವಾಗಿ ರವೆಯನ್ನು ಹಾಕಿ ಉಂಡೆಯಾಗದಂತೆ ಕೈಯಾಡಿಸಿ. ನಂತರ ಬಾಳೆಹಣ್ಣು ಮತ್ತು ಸಕ್ಕರೆ ಸೇರಿಸಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿಟ್ಟುಕೊಂಡು ಸ್ವಲ್ಪ ಸ್ವಲ್ಪವೇ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 
  • ನಂತರ ಬಾಣಲೆಯ ಬದಿಗಳಿಂದ ತುಪ್ಪ ಬಿಡಲು ಪ್ರಾರಂಭಿಸಿದಾಗ, ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ, ಬಾಳೆಹಣ್ಣಿನ ಕೇಸರಿ ಬಾತ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com