ಕೊಬ್ಬರಿ ಲಾಡು

ರುಚಿಕರವಾದ ಕೊಬ್ಬರಿ ಲಾಡು ಮಾಡುವ ವಿಧಾನ...
ಕೊಬ್ಬರಿ ಲಾಡು
ಕೊಬ್ಬರಿ ಲಾಡು

ಬೇಕಾಗುವ ಪದಾರ್ಥಗಳು...

  • ತುಪ್ಪ- ಸ್ವಲ್ಪ
  • ತೆಂಗಿನ ಕಾಯಿ ತುರಿ- ಎರಡೂವರೆ ಬಟ್ಟಲು
  • ಬೆಲ್ಲ- ಮುಕ್ಕಾಲು ಬಟ್ಟಲು
  • ಏಲಕ್ಕಿ ಪುಡಿ- ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿ ಬಿಸಿ ಮಾಡಿ. ನಂತರ ತೆಂಗಿನ ಕಾಯಿ ತುರಿ ಹಾಕಿ ತೇವಾಂಶ ಹೋಗುವವರೆಗೆ ಮಧ್ಯಮ ಅಥವಾ ಸಣ್ಣ ಉರಿಯಲ್ಲಿಟ್ಟು ಹುರಿಯಿರಿ.
  • ಬಳಿಕ ಬೆಲ್ಲವನ್ನು ಹಾಕಿ ಕೈಯಾಡಿಸುತ್ತಿರಿ. ಮಿಶ್ರಣವು ಆಕಾರವನ್ನು ಹಿಡಿದಿಡಲು ಪ್ರಾರಂಭಿಸುವವರೆಗೆ ಬೇಯಿಸುವುದನ್ನು ಮುಂದುವರಿಸಿ.
  • ನಂತರ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೆಚ್ಚಗಿರುವಾಗಲೇ ಉಂಡೆಗಳನ್ನು ಮಾಡಿದರೆ ರುಚಿಕರವಾದ ಕೊಬ್ಬರಿ ಲಾಡು ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com