ಈ ದೀಪಾವಳಿಗೆ ಮಾಡಿ ಪರ್ಫೆಕ್ಟ್ ಕಜ್ಜಾಯ...

ರುಚಿಕರವಾದ ಕಜ್ಜಾಯ ಮಾಡುವ ವಿಧಾನ...
ಕಜ್ಜಾಯ
ಕಜ್ಜಾಯ

ಬೇಕಾಗುವ ಪದಾರ್ಥಗಳು...

  • ಅಕ್ಕಿ- 1 ಬಟ್ಟಲು
  • ಬೆಲ್ಲ - ¾ ಕಪ್
  • ಬಿಳಿ ಎಳ್ಳು- ಸ್ವಲ್ಪ
  • ಗಸಗಸೆ- 1 ಚಮಚ
  • ಏಲಕ್ಕಿ ಪುಡಿ- ಸ್ವಲ್ಪ
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಮೊದಲನೆಯದಾಗಿ, 1 ಕಪ್ ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿ. ಪ್ರತಿ 4 ಗಂಟೆಗಳಿಗೊಮ್ಮೆ ನೀರನ್ನು ಬದಲಾಯಿಸುವ ಮೂಲಕ ರಾತ್ರಿಯಿಡೀ ನೆನೆಸಿದರೆ ಚೆನ್ನಾಗಿರುತ್ತದೆ.
  • ಬಳಿಕ ನೀರು ತೆಗೆದು ಕಾಟನ್ ಬಟ್ಟೆಯ ಮೇಲೆ ಅಕ್ಕಿಯನ್ನು ಹರಡಿ ನೀರಿನ ಅಂಶ ಒಣಗಲು ಬಿಡಿ. ನಂತರ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಪುಡಿ ಮಾಡಿಟ್ಟುಕೊಳ್ಳಿ. ನಂತರ ಜರಡಿಯ ಸಹಾಯದಿಂದ ಅಕ್ಕಿಯಲ್ಲಿ ಉಂಡೆಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ.
  • ಈಗ ತವಾದಲ್ಲಿ 1 ಟೀಸ್ಪೂನ್ ಎಳ್ಳು ಮತ್ತು 1 ಟೀಸ್ಪೂನ್ ಗಸಗಸೆ ಡ್ರೈ ರೋಸ್ಟ್‌ ಮಾಡಿಕೊಳ್ಳಿ.
  • ನಂತರ ದೊಡ್ಡ ಕಡಾಯಿಯನ್ನು ಒಲೆಯ ಮೇಲಿಟ್ಟು ¾ ಬೆಲ್ಲ ಮತ್ತು ¼ ಕಪ್ ನೀರನ್ನು ಹಾಕಿ. ಬೆಲ್ಲ ಕರಗುವವರೆಗೂ ಕೈಯಾಡಿಸಿ. ಬೆಲ್ಲದ ಪಾಕವನ್ನು 5 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿಕೊಂಡು. ನಂತರ ನಿಧಾನಗತಿಯಲ್ಲಿ ಅಕ್ಕಿ ಹಿಟ್ಟನ್ನು ಸೇರಿ ಉಂಡೆಗಳಿಲ್ಲದಂತೆ ಕೈಯಾಡಿಸಿ. 
  • ಬಳಿಕ ಎಳ್ಳು ಹಾಗೂ ಗಸಗಸೆ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಕ್ಕಿ ಹಿಟ್ಟಿನಲ್ಲಿ ತೇವಾಂಶ ಇರುವುದರಿಂದ ಮಿಶ್ರಣ ನೀರಾಗಿರುತ್ತದೆ. ಈ ಮಿಶ್ರಣವು ಒಂದು ರಾತ್ರಿ ನೆನೆಯಲು ಬಿಡಿ, ನಿಧಾನಗತಿಯಲ್ಲಿ ಮಿಶ್ರಣ ಗಟ್ಟಿಯಾಗುತ್ತದೆ. 
  • ನಂತರದ ದಿನ ಬಾಣಲೆಯನ್ನು ಒಲೆಯ ಮೇಲಿಟ್ಟು ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ ಕಜ್ಜಾಯದ ಆಕಾರದಲ್ಲಿ ತಟ್ಟಿ ಎಣ್ಣೆ ಬಿಟ್ಟು ಎರಡೂ ಬದಿಯಲ್ಲೂ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಕಜ್ಜಾಯ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com