ಆಲೂ ಚಿಪ್ಸ್

ಆಲೂ ಚಿಪ್ಸ್ ಮಾಡುವ ವಿಧಾನ...
ಆಲೂ ಚಿಪ್ಸ್
ಆಲೂ ಚಿಪ್ಸ್

ಬೇಕಾಗುವ ಪದಾರ್ಥಗಳು

  • ಆಲೂಗಡ್ಡೆ- 5-6
  • ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ..

  • ಮೊದಲಿಗೆ 5-6 ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಸಿಪ್ಪೆ ತೆಗೆದು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಸ್ಲೈಸರ್ ನಿಂದ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.
  • ಬಳಿಕ ಎರಡು ಬಾರಿ ನೀರು ಬದಲಿಸಿ ಸ್ಟಾರ್ಚ್ ಇಲ್ಲದಂತೆ ಚೆನ್ನಾಗಿ ತೊಳೆದುಕೊಳ್ಳಿ.
  • ಒಲೆಯ ಮೇಲೆ ಒಂದು ಪಾತ್ರೆಯಲ್ಲಿ ನೀರು ಹಾಗೂ ಉಪ್ಪು ಹಾಕಿಡಿ. ನೀರು ಕಾದ ಬಳಿಕ ಕತ್ತರಿಸಿಕೊಂಡ ಆಲೂಗಡ್ಡೆ ಚೂರುಗಳನ್ನು ಹಾಕಿ 2-3 ನಿಮಿಷ ಬೇಯಿಸಿಕೊಳ್ಳಿ. ತುಂಬಾ ಮೆತ್ತಗೆ ಆಗಬಾರದು. ನಂತರ ಬಿಸಿಲಿನಲ್ಲಿ 2-3 ದಿನ ಒಣಗಿಸಿಟ್ಟುಕೊಳ್ಳಿ. ಅಗತ್ಯವಿದ್ದಾಗ ಕಾದ ಎಣ್ಣೆಗೆ ಹಾಕಿ ಸವಿಯಿರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com