ಆಲೂಗಡ್ಡೆ ಹಪ್ಪಳ

ಆಲೂಗಡ್ಡೆ ಹಪ್ಪಳ ಮಾಡುವ ವಿಧಾನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೇಕಾಗುವ ಪದಾರ್ಥಗಳು...

  • ಆಲೂಗಡ್ಡೆ - 4
  • ಉಪ್ಪು- ರುಚಿಗೆ ತಕ್ಕಷ್ಟು
  • ಖಾರದ ಪುಡಿ- ಅರ್ಧ ಚಮಚ
  • ಜೀರಿಗೆ- 1-2 ಚಮಚ
  • ಎಣ್ಣೆ- ಒಂದು ಚಮಚ

ಮಾಡುವ ವಿಧಾನ..

  • ಮೊದಲಿಗೆ ಕುಕ್ಕರ್ ತೆಗೆದುಕೊಂಡು ಅದಕ್ಕೆ ನಾಲ್ಕು ಆಲೂಗಡ್ಡೆಗಳನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ
  • ನಂತರ ಬೆಂದ ಆಲೂಗಡ್ಡೆಗಳ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಿ. ನಂತರ ಕೈಯಲ್ಲಿ ಚೆನ್ನಾಗಿ ನುಣ್ಣಗೆ ಮಾಡಿಕೊಳ್ಳಿ. ನಂತರ ಉಪ್ಪು, ಅಚ್ಚ ಖಾರದ ಪುಡಿ, ಜೀರಿಗೆ, ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಬಿಸಿಲಿನಲ್ಲಿ ಒಂದು ದೊಡ್ಡ ಕವರ್ ಹಾಕಿ ಆಲೂ ಮಿಶ್ರಣವನ್ನು ಸ್ಪೂನ್ ನಲ್ಲಿ ತೆಗೆದುಕೊಂಡು ಕವರ್ ಮೇಲೆ ಹಾಕಿ ಮತ್ತೊಂದು ಕವರ್ ನಿಂದ ಒತ್ತಿ. ಇದೇ ರೀತಿ ಎಲ್ಲಾ ಮಿಶ್ರಣವನ್ನೂ ಹಾಕಿ 2-3 ದಿನಗಳ ಕಾಲ ಒಣಗಿಸಿ ಎರಡೂ ಬದಿಯಲ್ಲಿ ಒಣಗಿಸಿಟ್ಟುಕೊಂಡರೆ, ಅಗತ್ಯವಿದ್ದ ಸಮಯದಲ್ಲಿ ಅಲೂ ಹಪ್ಪಳವನ್ನು ಎಣ್ಣೆಗೆ ಹಾಕಿ ಸವಿಯಬಹುದು.
     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com