ಕಾರ್ನ್ ಬಜ್ಜಿ

ಕಾರ್ನ್ ಬಜ್ಜಿ ಮಾಡುವ ವಿಧಾನ.
ಕಾರ್ನ್ ಬಜ್ಜಿ
ಕಾರ್ನ್ ಬಜ್ಜಿ

ಬೇಕಾಗುವ ಪದಾರ್ಥಗಳು:

  • ಕಾರ್ನ್: 1 ಕಪ್
  • ಬೇಸನ್: 2 ಚಮಚ
  • ಹಸಿರು ಮೆಣಸಿನಕಾಯಿ: 2
  • ಈರುಳ್ಳಿ: 1
  • ಮೆಣಸಿನ ಪುಡಿ: 1 ಚಮಚ
  • ಉಪ್ಪು: 1 ಚಮಚ
  • ಕೊತ್ತಂಬರಿ ಸೊಪ್ಪು: 1 ಎಳೆ

ಮಾಡುವ ವಿಧಾನ:

  • ಒಂದು ಬಟ್ಟಲಿಗೆ, ಒಂದು ಕಪ್ ಕಾರ್ನ್, ಬೇಸನ್ ಹಿಟ್ಟು, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಮತ್ತು ಹಿಟ್ಟು ಸ್ಥಿರವಾಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.
  • ಕಲಸಿದ ಹಿಟ್ಟನ್ನು ಉಂಡೆ ಕಟ್ಟಿಕೊಂಡು ನಂತರ ಅದನ್ನು ಲಟ್ಟಿಸಿ
  • ಒಂದು ಪ್ಯಾನ್‌ಗೆ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿಕೊಳ್ಳಿ
  • ಲಟ್ಟಿಸಿದ ಹಿಟ್ಟನ್ನು ಎಣ್ಣೆಯಲ್ಲಿ ಚೆನ್ನಾಗಿ ಕರೆಯಿರಿ.
  • ಬಜ್ಜಿಯನ್ನು ಎಣ್ಣೆಯಿಂದ ತೆಗೆಯಿರಿ.

ಬಿಸಿಬಿಸಿಯಾದ ಕಾರ್ನ್ ಬಜ್ಜಿ ತಿನ್ನಲು ಸಿದ್ಧವಾಗಿದೆ.

- ಕೆ ಸುಶೀಲಾ, ಹೈದರಾಬಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com